ಸಸ್ಪೆಂಡ್ ಆಗಿರುವ ಎಸ್​ಐ ಮಹಮ್ಮದ್ ಇಮ್ರಾನ್ ಅಲಿ 
ಜಿಲ್ಲೆ

ಖೋಟಾನೋಟು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಬ್​ ಇನ್​ಸ್ಪೆಕ್ಟರ್​ ಅಮಾನತು; ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪ

ಬೆಂಗಳೂರು: ಖೋಟಾನೋಟು ಪ್ರಕರಣದಲ್ಲಿ ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಬ್​ ಇನ್​ಸ್ಪೆಕ್ಟರ್​ ಅಮಾನತುಗೊಂಡಿದ್ದಾರೆ. ಆರೋಪಿ ಎಸ್​ಐಯನ್ನು ಬೆಂಗಳೂರಿನ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಶರಣಪ್ಪ ಅಮಾನತುಗೊಳಿಸಿದ್ದಾರೆ.

ಬೆಂಗಳೂರಿನ ಗೋವಿಂದಪುರ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ಇಮ್ರಾನ್​ ಅಲಿ ಅಮಾನತುಗೊಂಡಿರುವ ವ್ಯಕ್ತಿ. ಖೋಟಾನೋಟು ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಇವರ ಮೇಲಿದೆ.

ಖೋಟಾನೋಟು ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಗಳಿಗೆ ಅನುಕೂಲ ಮಾಡಿಕೊಡಲು ಐದು ಲಕ್ಷ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದ. ಇದು ಬೆಳಕಿಗೆ ಬರುತ್ತಿದ್ದ ಎಸಿಪಿಯೊಬ್ಬರಿಂದ ತನಿಖೆ ನಡೆಸಲಾಗಿದೆ. ಆಗ ಪಿಎಸ್​ಐ ಲಂಚ ಪಡೆದಿರುವುದು ತನಿಖೆಯಲ್ಲಿ ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್​ ಅಲಿಯನ್ನು ಅಮಾನತುಗೊಳಿಸಲಾಗಿದೆ.