ಜಿಲ್ಲೆ

ಹೊರಬಂದವರಿಗೆ ಬೆತ್ತದ ರುಚಿ ತೋರಿದ ಪೊಲೀಸರು...

suchetana

ಬಳ್ಳಾರಿ: ಭಾನುವಾರಕ್ಕೊಮ್ಮೆ ಸರ್ಕಾರದಿಂದ ಘೋಷಿಸಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರ ಬಂದ ಜನರಿಗೆ ಪೊಲೀಸರು ನಗರದಲ್ಲಿ ಬೆಳಂಬೆಳಗ್ಗೆ ಬೆತ್ತದ ರುಚಿ ತೋರಿಸಿ ಮನೆಗೆ ಕಳುಹಿಸಿದರು.

ಹಲವು ಆಟೋ, ಬೈಕ್, ಟ್ಯಾಕ್ಸಿ ಸೇರಿ ಇನ್ನೀತರೆ ವಾಹನಗಳನ್ನು ಸೀಜ್ ಮಾಡಿ ಠಾಣೆಗೆ ಕರೆದೋಯ್ದರು.

ಕರೊನಾ ನಿಯಂತ್ರಣಕ್ಕೆ ಬಾರದ ಕಾರಣ, ಭಾನುವಾರಕ್ಕೊಮ್ಮೆ ಲಾಕ್ ಡೌನ್ ಘೋಷಿಸಲಾಗಿದೆ.ಇದರ ನಡುವೆಯೂ ಅನಗತ್ಯವಾಗಿ ಹೊರ ಬಂದ ಜನರಿಗೆ ಪೊಲೀಸರು ಚಳ್ಳೆಹಣ್ಣು ತಿನಿಸುತ್ತಿದ್ದಾರೆ.

ತಾವು ಬರೋದಲ್ದೇ ಸಣ್ಣ ಮಕ್ಕಳನ್ನು ಕರೆತರುತ್ತಿದ್ದಾರೆ.ಮಾಸ್ಕ್ ಕೂಡಾ ಹಾಕದೇ ಮಗುವನ್ನು ಕರೆತಂದ ವ್ಯಕ್ತಿಗೆ ಪೊಲೀಸರು ಅವಾಜ್ ಹಾಕಿದರು.

ಮಗುವಿನ ಮುಖ ನೋಡಿ ಎಚ್ಚರಿಕೆ ಕೊಟ್ಟು ಕೊನೆಗೆ ಮನೆಗೆ ಕಳುಹಿಸಿದರು.

ನಗರದ ಪ್ರಮುಖ ವೃತ್ತಗಳಾದ ರಾಯಲ್, ಮೋತಿ, ಎಸ್ಪಿ, ಸುಧಾ ಸರ್ಕಲ್ ಗಳಲ್ಲಿ ಬೆಳಗ್ಗೆ 6ಗಂಟೆಯಿಂದಲೇ ಪೊಲೀಸರು ನಿಯೋಜನೆಗೊಂಡಿದ್ದಾರೆ.

ಇದರ ನಡುವೆ ಶುಗರ್ ಟೆಸ್ಟ, ಕಾಯಿ ಪಲ್ಲೆ ಮಾರುವವರು, ಕೆಲ ರೈತರು ಅನಿವಾರ್ಯ ಕಾರಣಕ್ಕೆ ಹೊರ ಬಂದವರಿಗೆ ಸಮಸ್ಯೆಯಾಗುತ್ತಿದೆ.ಇವರು ಕೂಡ ಅನಗತ್ಯವಾಗಿ ಹೊರಗಡೆ ಬಂದಿದ್ದಾರೆ ಎಂದು ತಿಳಿದುಕೊಂಡು ಪೊಲೀಸರು ಲಘು ಲಾಠಿ ಬಿಸಿ ಮನೆಗೆ ಕಳುಹಿಸುತ್ತಿದ್ದಾರೆ.

ಸೋಮವಾರದಿಂದ ಶ್ರಾವಣ ಮಾಸವಿರುವುದರಿಂದ ಬೆಳಂ ಬೆಳಗ್ಗೆ ಅನೇಕರು ಮಟನ್, ಚಿಕನ್ ಖರೀದಿಗೆ ಮುಗಿಬಿದ್ದರು.ಇವರೆಲ್ಲರಿಗೂ ಪೊಲೀಸರು ತಿಳಿಹೇಳಿ ಮನೆಗೆ ಕಳುಹಿಸಿದರು.