ಜಿಲ್ಲೆ

ಹಿಂದು ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ?; ಪೊಲೀಸ್ ಇನ್​ಸ್ಪೆಕ್ಟರ್ ಎತ್ತಂಗಡಿ..

ಹುಬ್ಬಳ್ಳಿ: ಹಿಂದು ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಇನ್​ಸ್ಟೆಕ್ಟರ್​ ಎತ್ತಂಗಡಿ ಆಗಿದ್ದು, ಇಲಾಖೆಯಿಂದ ವರ್ಗಾವಣೆ ಆದೇಶ ಹೊರಬಿದ್ದಿದೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಮಹಾಂತೇಶ ಹೋಳಿ ಎತ್ತಂಗಡಿ ಆಗಿರುವ ಇನ್​ಸ್ಪೆಕ್ಟರ್. ಹಿಂದು ಸಂಘಟನೆಯ ಕಾರ್ಯಕರ್ತ ಮಲ್ಲಿಕಾರ್ಜುನ ಸತ್ತಿಗೇರೆ ಎಂಬವರ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇರೆಗೆ ಇಲಾಖೆ ಇವರನ್ನು ಎತ್ತಂಗಡಿ ಮಾಡಿದೆ.

ಕಿಮ್ಸ್ ಆವರಣದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ ವಿಚಾರವಾಗಿ ನಡೆದಿದ್ದ ಗಲಾಟೆ ವೇಳೆ ಮಲ್ಲಿಕಾರ್ಜುನ ಸತ್ತಿಗೇರೆ ಮೇಲೆ ಮಹಾಂತೇಶ ಹೋಳಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಇವರನ್ನು ಹುಬ್ಬಳ್ಳಿಯ ಸಿಸಿಬಿಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.