ಜಿಲ್ಲೆ

ಠಾಣೆಯ ಆವರಣದಲ್ಲೇ ಪೊಲೀಸರಿಂದ ಇಸ್ಪೀಟ್ ಜೂಜಾಟ!

ದಾವಣಗೆರೆ: ಜೂಜಾಟ ಆಡುವವರನ್ನು ಬಂಧಿಸಬೇಕಾದ ಪೊಲೀಸರೇ ಇಸ್ಪೀಟ್ ಆಡುವುದೆಂದರೆ? ಅದೂ ಪೊಲೀಸ್ ಠಾಣೆಯ ಆವರಣದ ವಿಶ್ರಾಂತಿ ಕೊಠಡಿಯಲ್ಲೇ ಇಂಥದೊಂದು ಕಾನೂನು ಬಾಹಿರ ಕೃತ್ಯ ನಡೆದರೆ ಹೇಗೆ?

ದಾವಣಗೆರೆಯ ಗ್ರಾಮಾಂತರ ಠಾಣೆಯು ಈ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಪೂರ್ವ ವಲಯ ಐಜಿಪಿ ಆದೇಶದಂತೆ ಸೋಮವಾರ ರಾತ್ರಿ ದಾಳಿ ನಡೆಸಿದ ಐಜಿ ಸ್ಕ್ವಾಡ್‌ನ ತಂಡಕ್ಕೆ ಐವರು ಪೊಲೀಸರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರಿಂದ 29 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಹೃದ್ರೋಗಿಯನ್ನು ದಾರಿ ಮಧ್ಯೆಯೇ ಬಸ್ಸಿನಿಂದ ಇಳಿಸಿದ ಜನ!

ಕಾನ್‌ಸ್ಟೇಬಲ್‌ಗಳಾದ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್, ಬಾಲರಾಜ್ ಅವರನ್ನು ವಶಕ್ಕೆ ಪಡೆಯಲಾಗಿದ್ದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿವೈಎಸ್ಪಿ ತಿರುಮಲೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಶಂಕರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.