More

    ಹಳ್ಳಿಗಳಿಗೆ ಕಾಲಿಟ್ಟ ಕೊವಿಡ್​-19; ಸೋಂಕು ಮಣಿಸಲು ಹಳ್ಳಿಗರು ತೆಗೆದುಕೊಂಡ ನಿರ್ಧಾರ ಅನುಕರಣೀಯ

    ಪಣಜಿ: ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೂ ಕೆಲವು ರಾಜ್ಯಗಳಲ್ಲಿ ತುಂಬ ಕಡಿಮೆ ಸಂಖ್ಯೆಯಲ್ಲಿದೆ. ಗೋವಾದಲ್ಲೂ ಅಷ್ಟೇ ಇದುವರೆಗೆ ಕೇವಲ 267 ಕೊವಿಡ್​-19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲೂ 65 ಮಂದಿ ಚೇತರಿಸಿಕೊಂಡು ಡಿಸ್​​ಚಾರ್ಜ್​ ಆಗಿದ್ದಾರೆ.

    ಆದರೆ ಈಗ ಗೋವಾದಲ್ಲಿ ಕರೊನಾ ಸೋಂಕು ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಬಗ್ಗೆ ವರದಿಯಾಗಿದೆ. ಕರೊನಾ ಕಾಲಿಟ್ಟ ಹಳ್ಳಿಗಳ ಜನರು ಸ್ವಯಂಪ್ರೇರಣೆಯಿಂದ ತಮ್ಮ ಗ್ರಾಮಗಳನ್ನೆಲ್ಲ ಸಂಪೂರ್ಣ ಲಾಕ್​ಡೌನ್​ ಮಾಡಿಕೊಂಡಿದ್ದಾರೆ. ಅವರೂ ಎಲ್ಲಿಗೂ ಹೊರಗೆ ಹೋಗುತ್ತಿಲ್ಲ. ಯಾರೇ ಬಂದರೂ ಅವರನ್ನು ಬಿಟ್ಟುಕೊಳ್ಳುತ್ತಿಲ್ಲ. ಎಲ್ಲ ಚಟುವಟಿಕೆಗಳನ್ನೂ ಬಂದ್​ ಮಾಡಿದ್ದಾರೆ. ಈ ಮೂಲಕ ಪ್ರಬುದ್ಧತೆ ತೋರುತ್ತಿದ್ದಾರೆ.

    ಇದನ್ನೂ ಓದಿ: ಕೊವಿಡ್​-19ನಿಂದ ನರಳಿ ಮೃತಪಟ್ಟ ಪತ್ರಕರ್ತನ ಕೊನೇ ಸಂದೇಶ ನೋಡಿ ಸಾರ್ವಜನಿಕರು ಕೆಂಡಾಮಂಡಲ…

    ಕರ್ನಾಟಕವನ್ನು ಸಂಪರ್ಕಿಸುವ ಗೋವಾದ ಪೂರ್ವ ಅಂಚಿನ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಸತಾರಿ ಜಿಲ್ಲೆಯ ಗುಲೇಲಿ ಎಂಬ ಗ್ರಾಮದ ಆರೋಗ್ಯ ಕಾರ್ಯಕರ್ತನೋರ್ವನಲ್ಲಿ ಜೂ.6ರಂದು ಮೊದಲ ಬಾರಿಗೆ ಕೊವಿಡ್​-19 ಕಾಣಿಸಿಕೊಂಡಿತು. ಕೂಡಲೇ ಎಚ್ಚೆತ್ತ ಹಳ್ಳಿಗರು ತಮ್ಮನ್ನು ತಾವು ಸ್ವತಃ ಲಾಕ್​ಡೌನ್​ಗೆ ಒಳಪಡಿಸಿಕೊಂಡಿದ್ದಾರೆ. ಹಳ್ಳಿಯಲ್ಲಿದ್ದ ಕೆಲವೇ ಅಂಗಡಿಗಳು ಬಾಗಿಲು ಮುಚ್ಚಿವೆ. ಅಲ್ಲಿನ ಜನರು ತಮ್ಮತಮ್ಮ ಮನೆಗಳಲ್ಲಿ ಸೆಲ್ಫ್​ ಕ್ವಾರಂಟೈನ್ ಆಗಿದ್ದಾರೆ.

    ಆದರೂ ಕರೊನಾ ಅಲ್ಲೇ ಪಕ್ಕದ ಇನ್ನೊಂದು ಹಳ್ಳಿಗೆ ಹರಡಿದೆ. ಅದೇ ಕರ್ನಾಟಕ-ಗೋವಾ ಗಡಿ ಭಾಗದ ಕೇರಿ ಎಂಬ ಗ್ರಾಮದ ಹಲವರಲ್ಲಿ ಕರೊನಾ ಕಾಣಿಸಿಕೊಂಡಿದೆ. ಹಾಗಾಗಿ ಆ ಗ್ರಾಮವನ್ನು ನಾಲ್ಕು ದಿನ ಸಂಪೂರ್ಣ ಸೀಲ್​ ಮಾಡಲಾಗಿದೆ.

    ಕೇರಿಯಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಯುವಕರು, ನಾಗರಿಕರು ಎಲ್ಲ ಸೇರಿ ಸ್ವಯಂ ಪ್ರೇರಣೆಯಿಂದ ಎಲ್ಲ ಅಂಗಡಿಗಳನ್ನೂ ಮುಚ್ಚಿದ್ದಾರೆ. ನಾವೆಲ್ಲರೂ ಸೇರಿ ಕರೊನಾವನ್ನು ಹತ್ತಿಕ್ಕಲೇ ಬೇಕು. ಇದು ಮುಂದೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹಾಗಾಗಿ ನಮಗೆ ನಾವೇ ಸೀಲ್​ ಡೌನ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹಳ್ಳಿಯ ಯುವಕರೆಲ್ಲ ಆ ಗ್ರಾಮದ ಮುಖ್ಯಸ್ಥನಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಸಾಕ್ಷಿ, ಮೀರಾ ಆಸೆ ಪಡಲು ಇದೇ ಕಾರಣವಿರಬಹುದೇ?

    ಸದ್ಯ ಸರ್ಕಾರದ ವತಿಯಿಂದ ಹಳ್ಳಿಯಲ್ಲಿ ಯಾವುದೇ ಲಾಕ್​ಡೌನ್​, ಸೀಲ್​ ಡೌನ್ ಮಾಡಲಾಗಿಲ್ಲ. ಅವರು ಹಳ್ಳಿಯನ್ನು ತಲುಪುವ ಮೊದಲೇ ಹಳ್ಳಿಗರೇ ಸೇರಿ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತಾವು ಲಾಕ್​ ಮಾಡಿಕೊಂಡ ಕ್ರಮ ಎಲ್ಲರಿಂದ ಶ್ಲಾಘನೆಗೆ ಒಳಗಾಗಿದೆ.

    ಕರೊನಾ ನಿಯಂತ್ರಣ ಮಾಡಲು ಲಾಕ್​ಡೌನ್​ ಮಾಡಲಾಗಿದೆ. ನಿಮ್ಮನಿಮ್ಮ ಮನೆಯಲ್ಲಿ ನೀವಿರಿ ಎಂದು ಹೇಳಿದರೂ ಕೇಳದೆ, ಮನಸಿಗೆ ಬಂದಂತೆ ಸುತ್ತಾಡಿದ್ದ ಹಲವು ರಾಜ್ಯಗಳ ಜನರ ಎದುರು ಈ ಹಳ್ಳಿಗರ ಕ್ರಮ ನಿಜಕ್ಕೂ ಅನುಕರಣೀಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

    ಸತಾರಿ ತಾಲೂಕಿನಲ್ಲಿ ಅನೇಕರು ಆರೋಗ್ಯ ಕಾರ್ಯಕರ್ತರು ಇದ್ದಾರೆ. ಕೊವಿಡ್​-19 ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದೇ ಸೋಂಕು ತಗುಲಲು ಕಾರಣ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೆ ಅಡ್ಡಿ ಮೇಲೆ ಅಡ್ಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts