ವಿಜಯನಗರ: ದೇವಸ್ಥಾನವೊಂದರ ಗೋಪುರವನ್ನು ಧ್ವಂಸಗೊಳಿಸದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ ಈ ಪ್ರಕರಣ ನಡೆದಿದ್ದು, ಹಿರೇಹಡಗಲಿ ಪೊಲೀಸರು ಮಾಡ್ಲಗೇರಿಯ ಅಂಜಿನೆಪ್ಪ (60), ಹಿರೇಕೊಳಚಿಯ ಚಮನ್ ಸಾಬ್ (45), ಹುಲಿಕಟ್ಟಿಯ ತಿರುಕಪ್ಪ (45), ಕೊಟ್ರಪ್ಪ( 45), ಮತ್ತು ಮಾನ್ಯರ ಮಸಾಲವಾಡದ ಬಸವರಾಜ್ (36) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂಜನ ಹಾಕುವ ಡಬ್ಬಿ, ಹಾರೆಗೋಲು, ಸುತ್ತಿಗೆ ಕಲ್ಲು ಒಡೆಯುವ ಕಬ್ಬಿಣದ ಚಾಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು; ಒಬ್ಬನ ಶವ ಪತ್ತೆ, ಇನ್ನಿಬ್ಬರು ಇನ್ನೂ ನಾಪತ್ತೆ..
ಹಿರೇಹಡಗಲಿಯ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಸ್ಥಾನದ ಗೋಪುರದ ಕಳಸವನ್ನು ಅ. 30ರಂದು ಧ್ವಂಸ ಮಾಡಲಾಗಿತ್ತು. ಆರೋಪಿಗಳ ಬಂಧನ ವಿಳಂಬವಾಗಿದ್ದನ್ನು ವಿರೋಧಿಸಿ ಇದೇ 16ರಂದು ಹಿರೇಹಡಗಲಿ ಪಟ್ಟಣ ಬಂದ್ ನಡೆಸಲು ಕರೆ ನೀಡಲಾಗಿತ್ತು. ಇದೀಗ ಬಂದ್ ನಡೆಯುವುದಕ್ಕೂ ಮೊದಲೇ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.