ಬೆಂಗಳೂರು: ಹಳೇ ದ್ವೇಷದಿಂದ ಫೈನಾನ್ಶಿಯರ್ ಮೇಲೆ ಹಲ್ಲೆ ನಡೆಸಲು ಸಜ್ಜಾಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುದ್ದಿನ ಪಾಳ್ಯದ ಶಿವರಾಜು ಅಲಿಯಾಸ್ ಕಳ್ಳ ಶಿವರಾಜು (33), ರಾಜಾಜಿನಗರದ ರಫೀ (31) ಮತ್ತು ಕುರುಬರಹಳ್ಳಿಯ ಶಿವಶಂಕರ್ (30) ಬಂಧಿತರು. ಮಾ. 17ರ ರಾತ್ರಿ ಮಾಗಡಿ ರಸ್ತೆಯ ಭಾರತನಗರ ಪಾರ್ಕ್ ಬಳಿ ಫೈನಾನ್ಶಿ ಯರ್ ಸುಧೀಂದ್ರ ಮೇಲೆ ಹಲ್ಲೆ ನಡೆಸಲು ಸಜ್ಜಾಗಿದ್ದರು. ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.