ಜಿಲ್ಲೆ

ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟಿದ್ದ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಬೆಳಗಾವಿ ಪೊಲಿಸರು ಶನಿವಾರ ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣದಡಿಯಲ್ಲಿ ಬೆಳಗಾವಿಯ ಕಾನ್ಸ್​ಟೇಬಲ್​ ಇಮ್ರಾನ್ ಖಾನ್ ಅಬ್ದುಲ್ ಮುನಾಫ್ ಘೋರಿ ಎಂಬಾತನ್ನು ಬಂಧಿಸಲಾಗಿದೆ. ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಆರೋಪಿ ಖಾನ್ ಸಿಟಿ ರಿಸರ್ವ ಪೋಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು‌ ಕೈ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.

ಯುವತಿಯು ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಳು. ದೂರು ಆಧರಿಸಿ ವಂಚಕ ಅರೋಪಿ ಪೊಲೀಸ್ ಪೆದೆಯನ್ನು ಬಂಧಿಸಲಾಗಿದೆ.