ಕಾಸರಗೋಡು: ಮಾನಸಿಕ ಅಸ್ವಸ್ಥ ವಿದ್ಯಾರ್ಥಿಗೆ ಸಲಿಂಗ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊವ್ವಲ್ ನಿವಾಸಿ ಸಾದಿಕ್(24) ಎಂಬಾತನ ವಿರುದ್ಧ ಆದೂರು ಠಾಣೆ ಪೊಲಿಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಚೆಂಗಳ ಪಂಚಾಯಿತಿ ವ್ಯಾಪ್ತಿಯ ಕ್ವಾರ್ಟ್ರರ್ಸ್ ಒಂದರಲ್ಲಿ ವಾಸಿಸುತ್ತಿರುವ ಮಾನಸಿಕ ಅಸ್ವಸ್ಥ 20ರ ಹರೆಯದ ಯುವಕನ ಪಾಲಕರು ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ. ಶಾಲೆಗೆ ತೆರಳಲು ಬಸ್‌ಗಾಗಿ ಕಾದು ನಿಂತಿದ್ದ ಯುವಕನನ್ನು ಬೈಕಿನಲ್ಲಿ ಕರೆದೊಯ್ದು ಆರೋಪಿ ಸಲಿಂಗ ಕಿರುಕುಳ ನೀಡಿದ್ದಾನೆ. ಆರು ತಿಂಗಳ ಹಿಂದೆ ಕಿರುಕುಳ ನೀಡಿದ್ದು, ನಂತರದ ಕೆಲವು ನಿರ್ದಿಷ್ಟ ದಿವಸಗಳಲ್ಲಿ ಆರೋಪಿ ಯುವಕನಿಗೆ ಕಿರುಕುಳ ನೀಡುತ್ತಾ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೇಸು ದಾಖಲಾಗುತ್ತಿದ್ದಂತೆ ಸಾದಿಕ್ ತಲೆಮರೆಸಿಕೊಂಡಿದ್ದಾನೆ.