ಜಿಲ್ಲೆ

ಪಿಎಂ ಪೋಷಣ್ ಸೋಶಿಯಲ್ ಆಡಿಟ್

ಸೌಮ್ಯ ಆರ್

ಕಾಸರಗೋಡು: ಶಾಲಾ ಮಧ್ಯಾಹ್ನದೂಟ (ಪಿಎಂ ಪೋಷಣ್) ವಿತರಣೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸೋಶಿಯಲ್ ಆಡಿಟ್ 2023-34 ಕಾರ್ಯಕ್ರಮ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರುಗಿತು. ಶಾಲಾ ಮಧ್ಯಾಹ್ನದೂಟದ ಸೋಶಿಯಲ್ ಆಡಿಟ್‌ನ ಬಗ್ಗೆ ‘ಕಿಲಾ’ ತರಬೇತಿ ಸಂಸ್ಥೆಯ ಫೆಸಿಲಿಟೇಟರ್ ರಾಜಾರಾಮ ಸಿ. ಮಾಹಿತಿ ನೀಡಿದರು.

ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ರವ್ಲಾ ಇಬ್ರಾಹಿಂ ಉದ್ಘಾಟಿಸಿದರು. ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪೆರ್ಲ ಕುಟುಂಬ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಶ್ಮೀಪ್ರಿಯ, ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಪುರುಷೋತ್ತಮ ಬಿ.ಎಂ., ಉಪಾಧ್ಯಕ್ಷ ಉಮೇಶ್ ಕೆ.ಪೆರ್ಲ, ನಾಗರಿಕ ಪೂರೈಕೆ ಇಲಾಖೆಯ ಪೆರ್ಲ ಮಾವೇಲಿ ಕೇಂದ್ರದ ವೇಣು ದೇವಸ್ಯ ಉಪಸ್ಥಿತರಿದ್ದರು.

ಆಡಿಟ್ ತಂಡದ ಲೀಡರ್ ಸುಪ್ರಭಾ ಓಡಿಟ್ ವರದಿ ಮಂಡಿಸಿದರು. ಮುಖ್ಯ ಶಿಕ್ಷಕ ಎನ್.ಕೇಶವ ಪ್ರಕಾಶ್ ಸ್ವಾಗತಿಸಿದರು. ಕೃಷ್ಣಪ್ರಸಾದ್ ಬನಾರಿ ನಿರೂಪಿಸಿದರು. ಶಿಕ್ಷಕಿ ಮಮತಾ ವಂದಿಸಿದರು.