ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಬಟ್ಟೆ ಕೈ ಚೀಲ ವಿತರಿಸಿದರು. ಪರಿಸರ ತಜ್ಞ ಗೋಪಾಲ ಪೆರಾಜೆ, ವಿಶ್ವನಾಥ್ ರೈ ಮೊದಲಾದವರಿದ್ದರು. 
ಜಿಲ್ಲೆ

ಪ್ಲಾಸ್ಟಿಕ್ ತ್ಯಾಜ್ಯದಿಂದ ಜೀವಜಾಲಕ್ಕೆ ಹಾನಿ: ಪರಿಸರ ತಜ್ಞ ಗೋಪಾಲ ಪೆರಾಜೆ

ಸೌಮ್ಯ ಆರ್

ಸುಳ್ಯ: ಬೆಟ್ಟ, ಗುಡ್ಡ, ಸಮುದ್ರ ಕೂಡ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದೆ. ಜೀವಜಾಲಕ್ಕೆ ಇದು ತೀವ್ರ ಹಾನಿ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಪರಿಸರ ತಜ್ಞ ಗೋಪಾಲ ಪೆರಾಜೆ ಹೇಳಿದರು.

ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ, ಪಯಸ್ವಿನಿ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ, ಜಾಲ್ಸೂರು ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಪ್ಲಾಸ್ಟಿಕ್ ಮತ್ತು ನಿರ್ವಹಣೆ ಮಾಹಿತಿ-ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ರೈ ಉದ್ಘಾಟಿಸಿದರು. ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮನೆ ಅಧ್ಯಕ್ಷತೆ ವಹಿಸಿದ್ದರು. ಪಯಸ್ವಿನಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ, ಸುಳ್ಯ ಬ್ಯಾಂಕ್ ಆಫ್ ಬರೋಡ ಶಾಖಾ ಹಿರಿಯ ವ್ಯವಸ್ಥಾಪಕ ವಿಜಯ್ ಎಂ, ಮುಖ್ಯಶಿಕ್ಷಕಿ ಜಯಲತಾ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ ಉಪಸ್ಥಿತರಿದ್ದರು. ಶಿಕ್ಷಕ ಶಿವಪ್ರಕಾಶ್ ಕುದ್ಪಾಜೆ ನಿರೂಪಿಸಿದರು. ಶಿಕ್ಷಕ ಶಿವಪ್ರಸಾದ್ ವಂದಿಸಿದರು. ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಸಹಕರಿಸಿದರು.

ಕ್ಯಾ.ಬ್ರಿಜೇಶ್ ಚೌಟ ಭಾಗಿ

ಸುಳ್ಯದಲ್ಲಿ ಕೆಡಿಪಿ ಸಭೆಗೆ ಆಗಮಿಸಿ ಮಂಗಳೂರಿಗೆ ತೆರಳುತ್ತಿದ್ದ ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಆಗಮಿಸಿ ಶಾಲಾ ಆವರಣದಲ್ಲಿ ಗಿಡ ನೆಟ್ಟರು. ಸಮಿತಿಯ ವತಿಯಿಂದ ಶಾಲಾ ಮಕ್ಕಳಿಗೆ ನೀಡಿದ ಬಟ್ಟೆ ಕೈಚೀಲವನ್ನು ಸಾಂಕೇತಿಕವಾಗಿ ಶಾಲಾ ನಾಯಕಿಗೆ ವಿತರಿಸಿ ಶುಭ ಹಾರೈಸಿದರು.