ಕೋಟ: ಮನುಕುಲಕ್ಕೆ ಆಪತ್ತು ಸೃಷ್ಟಿಸುವ ಪ್ಲಾಸ್ಟಿಕ್ ಇಂದು ಜಲಮಾತೆಯನ್ನು ಬೆಂಬಿಡದ ಭೂತದಂತೆ ನದಿ, ಸಮುದ್ರ ಜಲಚರ ಜೀವಿಗಳಿಗೆ ಸಂಕಷ್ಟವನ್ನು ತಂದದೊಡ್ಡಿದೆ ಇದರ ಬಗ್ಗೆ ಜಾಗೃತರಾಗಬೇಕು ಎಂದು ಅರಣ್ಯ ಇಲಾಖೆ ಉಡುಪಿ ವಲಯಾಧಿಕಾರಿ ಮಲ್ತೇಶ್ ಅಳಲಗಿರಿ ಹೇಳಿದರು.
ಕೋಟ ಪಂಚವರ್ಣ ಯುವಕ, ಮಹಿಳಾ ಮಂಡಲ ನೇತೃತ್ವದಲ್ಲಿ ಪಂಚವರ್ಣ ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ಜೆಸಿಐ, ಸಿನಿಯರ್ ಕೋಟ ಲಿಜನ್, ಕೋಟತಟ್ಟು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ಉಡುಪಿ ವಲಯ ಸಂಯೋಜನೆಯೊಂದಿಗೆ ಕೋಟತಟ್ಟು ಪಡುಕರೆ ಬೀಚ್‌ನಲ್ಲಿ 250ನೇ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತಾ ಸಂದೇಶ ನೀಡಿ ಮಾತನಾಡಿದರು.
ಉಡುಪಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಾದ ಉದಯ್ ಕುಮಾರ್, ರಮೇಶ್ ಕೋಟ, ಶ್ರೀನಿವಾಸ ಜೋಗಿ,ಪಂಚವರ್ಣಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲ ಉಪಾಧ್ಯಕ್ಷೆ ಪುಷ್ಪಾ ಕೆ.ಹಂದಟ್ಟು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ಸ್ವಾಗತಿಸಿ, ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.