ಕೊಕ್ಕಡ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸೌತಡ್ಕ ದೇವಳದ ಆವರಣದಲ್ಲಿ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ರಕ್ತೇಶ್ವರಿ ಗುಡಿ ಆವರಣದಲ್ಲಿ ಅರಣ್ಯ ಇಲಾಖೆ ಉಪ್ಪಿನಂಗಡಿ ವಿಭಾಗ ಕೊಕ್ಕಡ ಶಾಖೆ ವತಿಯಿಂದ ಗಿಡ ನಾಟಿ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಸೌತಡ್ಕ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ನಿಕಟಪೂರ್ವ ಸದಸ್ಯ ಪ್ರಶಾಂತ್ ಪೂವಾಜೆ, ದೇವಳದ ಆಡಳಿತಾಧಿಕಾರಿ ಶ್ರೀನಿವಾಸ್ ಕೆ.ವಿ., ಮ್ಯಾನೇಜರ್ ರಾಮಕೃಷ್ಣ ಭಟ್, ಉಪವಲಯ ಅರಣ್ಯ ಅಧಿಕಾರಿ ಶಿವಾನಂದ ಆಚಾರ್ಯ, ಗಸ್ತು ಅರಣ್ಯ ಪಾಲಕ ಸುನೀಲ್ ನಾಯ್ಕ, ಶಿವಾನಂದ ಕುದುರಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸೇವಾಪ್ರತಿನಿಧಿಗಳಾದ ರೋಹಿಣಿ, ಕುಸುಮಾ, ಒಕ್ಕೂಟದ ಪದಾಧಿಕಾರಿಗಳಾದ ಅಶ್ವಿನಿ, ಅರುಣ ಪೂವಾಜೆ ಉಪಸ್ಥಿತರಿದ್ದರು.