ಜಿಲ್ಲೆ

ಮಿಯಾವಾಕಿ ನಂದನವನ ಸಂಕಲ್ಪ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ರೋಟರಿ ಕ್ಲಬ್​ ಸುಬ್ರಹ್ಮಣ್ಯದ ವತಿಯಿಂದ ಇನ್ನರ್​ವ್ಹೀಲ್​ ಕ್ಲಬ್​ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಅರಣ್ಯ ಇಲಾಖೆ, ಸೀನಿಯರ್​ ಚೇಂಬರ್​ ಇಂಟರ್​ ನ್ಯಾಷನಲ್​ ಸುಬ್ರಹ್ಮಣ್ಯ, ಬ್ಯಾಂಕ್​ ಆಪ್​ ಬರೋಡಾ ಮತ್ತು ಕೆಎಸ್​ಎಸ್​ ಕಾಲೇಜಿನ ಆಶ್ರಯದಲ್ಲಿ ಅತೀ ಕಡಿಮೆ ಸ್ಥಳದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಜಪಾನ್​ ತಂತ್ರಜ್ಞಾನದ ಮಿಯಾವಾಕಿ ನಂದನವನ ನಿರ್ಮಾಣಕ್ಕೆ ಸುಬ್ರಹ್ಮಣ್ಯದ ಎಸ್​ಎಸ್​ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ರಾಮಶರ್ಮ ಅವರ ತೋಟದಲ್ಲಿ ಚಾಲನೆ ನೀಡಲಾಯಿತು.

ಗಿಡ ನೆಡುವ ಮೂಲಕ ಕೆ.ರಾಮ ಶರ್ಮ ಯೋಜನೆಗೆ ಚಾಲನೆ ನೀಡಿದರು. ಬಳಿಕ ವಿವಿಧ ಸಂ ಸಂಸ್ಥೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 100ಕ್ಕೂ ಅಧಿಕ ಮಂದಿ 150ಕ್ಕೂ ಅಧಿಕ ಸಸಿಗಳನ್ನು ನೆಟ್ಟರು. 80ಕ್ಕೂ ಅಧಿಕ ಮಂದಿ ವನ ನಿರ್ಮಾಣದ ಸಂಕಲ್ಪ ಮಾಡಿದರು.

ಮಿಯಾವಾಕಿ ಅರಣ್ಯ ತ ಮಹೇಶ್​ ಶೆಣೈ ಈ ಯೋಜನೆಯ ಮಹತ್ವವವನ್ನು ವಿವರಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್​ ಅಧ್ಯಕ್ಷ ಚಂದ್ರಶೇಖರ ನಾಯರ್​ ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್​ ಛೇಂಬರ್​ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಇನ್ನರ್​ವ್ಹೀಲ್​ ಅಧ್ಯೆ ಶ್ರುತಿ ಮಂಜುನಾಥ್​, ಬ್ಯಾಂಕ್​ ಆಫ್​ ಬರೋಡಾದ ಪ್ರಬಂಧಕ ವಿಶ್ರುತ್​ ಕುಮಾರ್​, ಕೆಎಸ್​ಎಸ್​ ಕಾಲೇಜಿನ ಉಪನ್ಯಾಸಕಿ ಆರತಿ, ಉಪವಲಯಾರಣ್ಯಾಧಿಕಾರಿ ಮನೋಜ್​ ಕುಮಾರ್​, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂದ ಅಧ್ಯಕ್ಷ ಜಯಪ್ರಕಾಶ್​ ಕೂಜುಗೋಡು ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಪೂರ್ವಾಧ್ಯಕ್ಷರು, ಸದಸ್ಯರು, ಬ್ಯಾಂಕ್​ ಆಪ್​ ಬರೋಡಾದ ಸಿಬ್ಬಂದಿ, ಸಂ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.