ಜಿಲ್ಲೆ

ಪೀಸ್ ಆಟೋ ಹಾಗು ಥ್ರೀ ವೀಲ್ಸ್ ಯುನೈಟೆಡ್ ವತಿಯಿಂದ ಆಟೋ ರಿಕ್ಷಾ ದಿನಾಚರಣೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಪೀಸ್ ಆಟೋ ಹಾಗು ಥ್ರೀ ವೀಲ್ಸ್ ಯುನೈಟೆಡ್ ಪ್ರತಿ ವರ್ಷದಂತೆ ಈ ವರ್ಷವೂ ಆಟೋ ರಿಕ್ಷಾ ದಿನಾಚರಣೆಯನ್ನು ವಿಲ್ಸನ್ ಗಾರ್ಡನ್​ನ ಹೊಂಬೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರ ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನವಾದ ನವೆಂಬರ್ 9 ನ್ನು ಪೀಸ್ ಆಟೋ ಸಂಘಟನೆ ಆಟೋ ದಿನವಾಗಿ ಕಳೆದ ೮ ವರ್ಷಗಳಿಂದ ಆಚರಿಸುತ್ತಿದೆ.

ನಗರದ ಸಾಂಸ್ಕೃತಿಕ ರಾಯಭಾರಿಗಳಾದ ಆಟೋ ರಿಕ್ಷಾ ಚಾಲಕರ ರಾಯಭಾರಿಯಾಗಿ ಚಿತ್ರ ನಟ ಡಾಲಿ ಧನಂಜಯ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಹಕರು ಆಟೋಗಳಲ್ಲಿ ಮರೆತ ಬೆಲೆಬಾಳುವ ವಸ್ತುಗಳನ್ನು ಹಿಂತಿರುಗಿಸಿದ ೭ ಆಟೋ ಚಾಲಕರಿಗೆ ಡಾಲಿ ಧನಂಜಯ್ ಚಿನ್ನದ ಪದಕ ವಿತರಿಸಿದರು.

ಈ ವೇಳೆ ಪೀಸ್ ಆಟೋ ರಾಜ್ಯಾಧ್ಯಕ್ಷರಾದ ಶ್ರೀ ರಘು ನಾರಾಯಣ ಗೌಡರು ಉಪಸ್ಥಿತರಿದ್ದರು.