ಸಾಂದರ್ಭಿಕ ಚಿತ್ರ  
ಜಿಲ್ಲೆ

ಬಿಜೆಪಿ ಕಾರ್ಯಕರ್ತರಿಂದ ಗೂಸಾ ತಿಂದ ಜೇಬುಗಳ್ಳ; ಕದಿಯುವಾಗಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು!

ಮಂಡ್ಯ: ಜೇಬಿಗೆ ಕೈ ಹಾಕಿ ಕದಿಯುವಾಗಲೇ ಸಿಕ್ಕಿಬಿದ್ದ ಜೇಬುಗಳ್ಳ ಬಿಜೆಪಿ ಕಾರ್ಯಕರ್ತರಿಂದ ಗೂಸಾ ತಿಂದು ಪೊಲೀಸರ ವಶಕ್ಕೆ ಒಳಗಾಗಿದ್ದಾನೆ. ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆ ಸರ್ಕಲ್​ನಲ್ಲಿ ಈ ಪ್ರಕರಣ ನಡೆದಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರು ಪ್ರವಾಸ ಮುಗಿಸಿ ಶಿವಮೊಗ್ಗಕ್ಕೆ ತೆರಳಲಿರುವುದರಿಂದ ಮಾರ್ಗಮಧ್ಯೆ ಕೆ.ಆರ್. ಪೇಟೆ ವೃತ್ತದಲ್ಲಿ ಅವರ ಸ್ವಾಗತಕ್ಕಾಗಿ ಬಿಜೆಪಿ ಕಾರ್ಯಕರ್ತರು ಕಾದು ನಿಂತಿದ್ದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರಿಂದ ಜನಜಂಗುಳಿ ಉಂಟಾಗಿತ್ತು.

ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಜೇಬುಗಳ್ಳ ಪ್ರಕಾಶ್ ಎಂಬವರ ಜೇಬಿಗೆ ಕೈ ಹಾಕಿದ್ದ. ಅವರ ಕಿಸೆಯಲ್ಲಿ 75 ಸಾವಿರ ರೂ. ಇತ್ತು ಎನ್ನಲಾಗಿದೆ. ಹೀಗೆ ಜೇಬಿಗೆ ಕೈ ಹಾಕಿದ್ದಾಗಲೇ ಜೇಬುಗಳ್ಳನನ್ನು ಹಿಡಿಯಲಾಗಿದ್ದು, ಬಳಿಕ ಕಾರ್ಯಕರ್ತರೆಲ್ಲ ಸೇರಿ ಥಳಿಸಿ, ನಂತರ ಕೆ.ಆರ್.ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.