ಗುರುಪುರ: ದೈಹಿಕ ಕ್ಷಮತೆ ಕಾಪಾಡಲು ಕ್ರೀಡೆ ಸಹಕಾರಿ. ಕ್ರೀಡಾಕೂಟಗಳಿಂದ ಸಮಾಜದ ಎಲ್ಲ ವರ್ಗಗಳ ಒಗ್ಗೂಡಿಕೆ ಮತ್ತು ಬಲಿಷ್ಠ ಸಂಘಟನೆ ಸಾಧ್ಯ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಮಂಗಳೂರು ತಾಲೂಕಿನ ಕುಳವೂರಿನ ಎಆರ್‌ಟಿ ಫ್ರೆಂಡ್ಸ್ ವತಿಯಿಂದ ಬಳ್ಳಾಜೆ ಎಂಆರ್‌ಟಿ ಮೈದಾನದಲ್ಲಿ ಮಂಗಳವಾರ ನಡೆದ 8ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಎಂಆರ್‌ಟಿ ಫ್ರೆಂಡ್ಸ್‌ನ ಅಧ್ಯಕ್ಷ ಜಿತೇಶ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುತ್ತೂರು ಪಂಚಾಯಿತಿ ಸದಸ್ಯ ಸತೀಶ್ ಪೂಜಾರಿ ಬಳ್ಳಾಜೆ, ಉದ್ಯಮಿಗಳಾದ ಪ್ರೇಮನಾಥ ಮಾರ್ಲ, ಪುನೀತ್ ಕುಮಾರ್ ಕಟ್ಟೆಮಾರ್, ಕುಪ್ಪೆಪದವು ಬಜರಂಗ ದಳ ಮಾಜಿ ಸಂಚಾಲಕ ವಿಶ್ವನಾಥ ಪಾಕಜೆ, ಮೆಸ್ಕಾಂ ಎಡಪದವು ಸೆಕ್ಷನ್‌ನ ರುಕ್ಮಯ ಕುಲಾಲ್, ಪ್ರಮುಖರಾದ ತಾರನಾಥ ಉಗ್ರಾಯಿ, ಮಹಾಬಲ ಸಾಲ್ಯಾನ್, ಸುಧೀರ್ ಜೈನ್, ಅಶೋಕ್ ಕಟ್ಟೆಮಾರ್, ಹೊನ್ನಯ್ಯ ಅಟ್ಟೆಪದವು, ಅಜಯ್ ಅಮೀನ್ ನಾಗಂದಡಿ, ಹರೀಶ್ ಅಂಬೆಲೊಟ್ಟು, ಚಂದ್ರಹಾಸ್ ಅಗರಿ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಪಾಕಜೆ ಕುಪ್ಪೆಪದವು ಸ್ವಾಗತಿಸಿದರು. ಸುಧಾಕರ ದೋಟದಡಿ ವಂದಿಸಿದರು.
ಪಂದ್ಯಾಟ ವಿಜೇತರು
ಪಂದ್ಯಾಟದಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದು, ಎಆರ್‌ಟಿ ಫ್ರೆಂಡ್ಸ್ ಪ್ರಥಮ ಮತ್ತು ಫ್ಯೂಚರ್ ಸ್ಟಾರ್ ಬೊಳಿಯ 2ನೇ ಸ್ಥಾನ ಪಡೆದುಕೊಂಡಿತು.