ಜಿಲ್ಲೆ

ವ್ಯಕ್ತಿತ್ವ ವಿಕಸನದಿಂದ ಮಾನವೀಯ ಮೌಲ್ಯ

ಇಂದಿರಾ ಎನ್ ಕೆ

ಬೈಂದೂರು: ಜೆಸಿಐ ಸಂಸ್ಥೆ ಯುವಕರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯ ಮೌಲ್ಯ ರೂಪಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆಗೈಯುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಉಪ್ಪುಂದ ಹೇಳಿದರು.

ಮಾತೃಶ್ರೀ ಸಭಾಭವನದಲ್ಲಿ ಮಂಗಳವಾರ ಜೆಸಿಐ ಉಪ್ಪುಂದ ಘಟಕದ 21ನೇ ವರ್ಷದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷ ಜೇಸಿ ಮಂಜುನಾಥ ದೇವಾಡಿಗ ಸ್ವಾಗತಿಸಿ, ಗತವರ್ಷದ ವರದಿ ಮಂಡಿಸಿದರು. ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿ, 2024-25ನೇ ಸಾಲಿನ ನೂತನ ಅಧ್ಯಕ್ಷ ಭರತ್ ದೇವಾಡಿಗ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ವಲಯಾಧ್ಯಕ್ಷ ಜೆಸಿಐ ಸೆನೆಟರ್ ಅಭಿಲಾಷ್ ಬಿ.ಎ., ಪದಪ್ರಧಾನ ಅಧಿಕಾರಿ ಅಶ್ವಿನಿ ಐತಾಳ್, ಜೆಸಿಐ ನಿರ್ಗಮನ ಕಾರ್ಯದರ್ಶಿ ನರಸಿಂಹ ದೇವಾಡಿಗ, ರಾಜ್ಯ ಸರ್ಕಾರಿ ನೌಕರರ ಸಂಘ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಜೆಸಿಐ ಪೂರ್ವಾಧ್ಯಕ್ಷ ಪ್ರದೀಪ್‌ಕುಮಾರ್ ಶೆಟ್ಟಿ ಕಾರಿಕಟ್ಟೆ, ಸ್ಥಾಪಕಾಧ್ಯಕ್ಷ ಎನ್.ದಿವಾಕರ್ ಶೆಟ್ಟಿ, ಲೇಡಿ ಜೆಸಿ ಅಧ್ಯಕ್ಷೆ ಸುಮನಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಜೆಜೆಸಿ ಅಧ್ಯಕ್ಷೆ ಸಂಜನಾ ದೇವಾಡಿಗ ಜೇಸಿವಾಣಿ ವಾಚಿಸಿದರು, ಅಲೂರು ಅಭಿಷೇಕ್ ದೇವಾಡಿಗ ವಂದಿಸಿದರು.