ಜಿಲ್ಲೆ

ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ, ಆರೋಗ್ಯ ತರಬೇತಿ ಶಿಬಿರ

ಇಂದಿರಾ ಎನ್ ಕೆ

ಗಂಗೊಳ್ಳಿ: ಜಿ.ಎಸ್.ವಿ ಅಸೋಸಿಯೇಶನ್ ವತಿಯಿಂದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ವಾಧ್ಯಮ ಶಾಲೆ, ಸರಸ್ವತಿ ವಿದ್ಯಾಲಯ ಕನ್ನಡ ವಾಧ್ಯಮ ಶಾಲೆ ಮತ್ತು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ, ಉತ್ತಮ ಆರೋಗ್ಯ ಮತ್ತು ಸ್ಪೋಕನ್ ಇಂಗ್ಲಿಷ್ ಬಗ್ಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ಎಸ್.ವಿ. ಆಂಗ್ಲ ವಾಧ್ಯಮ ಶಾಲೆ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಜಿ.ಎಸ್.ವಿ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪಿ.ಪೈ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ವಾಂಟೆಸರಿ ಮತ್ತು ಯೋಗ ತರಬೇತುದಾರೆ ಬೆಂಗಳೂರಿನ ಜಯಶ್ರೀ ಮೃತ್ಯುಂಜಯ ಅವರು ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ, ಉತ್ತಮ ಆರೋಗ್ಯ ಮತ್ತು ಸ್ಪೋಕನ್ ಇಂಗ್ಲಿಷ್ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಿದರು.

ಸರಸ್ವತಿ ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಜಿ.ಎಸ್.ವಿ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ್ ಕಾಮತ್, ಸದಸ್ಯ ಎಂ.ನಾಗೇಂದ್ರ ಪೈ, ಮೂರು ವಿದ್ಯಾಸಂಸ್ಥೆಗಳ ಮುಖ್ಯ ಶಿಕ್ಷಕರಾದ ರಾವೇಂದ್ರ ಶೇರುಗಾರ್, ಗೋಪಾಲ್ ದೇವಾಡಿಗ ಮತ್ತು ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.