ಜಿಲ್ಲೆ

ಒಳ್ಳೆಯ ಉದ್ದೇಶದಿಂದ ವ್ಯಕ್ತಿ ಘನತೆ ಹೆಚ್ಚಳ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ಒಳ್ಳೆಯ ಉದ್ದೇಶ ವ್ಯಕ್ತಿಗಳನ್ನು ಎತ್ತರಕ್ಕೆ ಕೊಂಡ್ಯೊಯಬಲ್ಲದು. ಇದಕ್ಕೆ ಕೋಸ್ಟಲ್ ಪ್ಯಾರಡೈಸ್ ಸಾಕ್ಷಿ ಎಂದು ಉಡುಪಿ ಆದಮಾರು ಮಠಾಧೀಶ ಈಶಪ್ರಿಯ ಸ್ವಾಮೀಜಿ ಹೇಳಿದರು.

ಸಾಸ್ತಾನ- ಪಾಂಡೇಶ್ವರದಲ್ಲಿ ಆರಂಭಗೊಂಡ ಕೋಸ್ಟಲ್ ಪ್ಯಾರಡೈಸ್ ವಾಣಿಜ್ಯ ಸಂಕೀರ್ಣ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಸಮಾಜದಲ್ಲಿ ಬದುಕಲು ಅವಕಾಶ ಕಲ್ಲಿಸುವುದರ ಜತೆಗೆ ಸಹಾಯಹಸ್ತ ನೀಡುವ ಮನಸ್ಥಿತಿ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದರು.

ಉದ್ಯಮಿ ಶೇಡಿಕೋಡ್ಲು ಎಚ್ ವಿಠ್ಠಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಾಸ್ತಾನ ಸಂತ ಅಂಥೋನಿ ಚರ್ಚ್ ಧರ್ಮಗುರು ಸುನೀಲ್ ಡಿಸಿಲ್ವ, ಗೀತಾನಂದ ಫೌಂಡೇಶನ್ ಆನಂದ ಸಿ.ಕುಂದರ್, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲಾ ಪೂಜಾರ್ತಿ, ಕೆಎಸ್‌ಎಫ್‌ಸಿ ಮ್ಯಾನೇಜರ್ ಆರ್.ಪ್ರಸಾದ್, ಸಿವಿಲ್ ಇಂಜಿನಿಯರ್ ಗೋಪಾಲ ಭಟ್, ರೋಟರಿ ಜಿಲ್ಲಾ ಗವರ್ನರ್ ಸಿ.ಎ ದೇವ್ ಆನಂದ್, ಸಂಸ್ಥೆಯ ಆಡಳಿತ ಪಾಲುದಾರರಾದ ವೀಣಾ ಬಿ.ಎಂ ಭಟ್, ಉಷಾ, ಮಹೇಶ್ ಶೆಟ್ಟಿ, ಕಮಲಾಕ್ಷಿ ಪ್ರಕಾಶ್ ಉಡುಪ, ಸುಪ್ರೀತಾ ಸತೀಶ್ ಶೆಟ್ಟಿ ಸುಜಾತಾ ಉಪಸ್ಥಿತರಿದ್ದರು. ಮಹೇಶ್ ಶೆಟ್ಟಿ ಸ್ವಾಗತಿಸಿದರು. ಬಿ.ಎಂ. ಭಟ್ ಪ್ರಸ್ತಾವನೆಗೈದರು. ಅಲ್ವಿನ್ ಅಂದ್ರಾದೆ ವಂದಿಸಿದರು. ಅಶೋಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಗಣ್ಯರಿಗೆ ಗೌರವಾರ್ಪಣೆ

ಉಡುಪಿಯ ಎ.ಜಿ ಅಸೋಸಿಯೇಟ್ಸ್‌ನ ಸಿನಿಯರ್ ಸಿವಿಲ್ ಇಂಜಿನಿಯರ್ ಗೋಪಾಲ್ ಭಟ್, ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಪೂಜಾರಿ, ಕೆಎಸ್‌ಎಫ್‌ಸಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆರ್.ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು

ಸುಸಜ್ಜಿತ ವ್ಯವಸ್ಥೆಗಳು ಲಭ್ಯ

ಕೋಸ್ಟಲ್ ಪ್ಯಾರಡೈಸ್ ವಾಣಿಜ್ಯ ಸಂಕೀರ್ಣದಲ್ಲಿ ಸುಸಜ್ಜಿತ ವ್ಯವಸ್ಥೆಗಳ ಕಲ್ಪಿಸಲಾಗಿದೆ. ಬೋರ್ಡಿಂಗ್, ಲಾಡ್ಡಿಂಗ್, ಕಾನ್ಫರೆನ್ಸ್ ಹಾಲ್, ಮದುವೆ ಹಾಲ್, ಡಿಲಕ್ಸ್ ರೂಮ್ಸ್ ಮತ್ತು ಸೂಟ್ಸ್ ಕೋಸ್ಟಲ್ ಸಸ್ಯಾಹಾರಿ ಉಪಾಹಾರಗೃಹ ಮುಂತಾದ ಸೌಲಭ್ಯಗಳನ್ನು ಉದ್ಘಾಟಿಸಲಾಯಿತು.