ಜಿಲ್ಲೆ

ಪಿಯು ವಿದ್ಯಾರ್ಥಿಗಳಿಗೆ ಅಗತ್ಯ ಆಪ್ತ ಸಮಾಲೋಚನೆ: ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅಭಿಪ್ರಾಯ

Avinash R

ಬೆಳ್ತಂಗಡಿ: ಯಶಸ್ಸಿನ ಹಿಂದೆ ಓಡಬೇಕೆಂಬ ಛಲವಿರುವ ಈಗಿನ ಪಿಯು ವಿದ್ಯಾರ್ಥಿಗಳಿಗೆ ಸರಿಯಾದ ಹಂತದಲ್ಲಿ ಸಮರ್ಥವಾದ ಆಪ್ತ ಸಮಾಲೋಚನಾ ಮಾರ್ಗದರ್ಶನ ಬೇಕು ಎಂದು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಿವೃತ್ತ ಹಿರಿಯ ಮನೋವೈದ್ಯ, ಪದ್ಮಶ್ರೀ ಡಾ. ಸಿ.ಆರ್ ಚಂದ್ರಶೇಖರ್ ಹೇಳಿದರು.

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ನಡೆದ ಮಾನಸ ಮಾರ್ಗದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ವತ್‌ನ ಪಿಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜ್ಞಾಪಕಶಕ್ತಿ ವೃದ್ಧಿ, ಒತ್ತಡ ನಿವಾರಣೆ, ಪರೀಕ್ಷಾ ತಯಾರಿಯ ವಿಧಾನ ಹಾಗೂ ಮನಸ್ಸಿನ ಜಾಡ್ಯನಿವಾರಣೆ, ಇತ್ಯಾದಿವಿಷಯಗಳ ಬಗ್ಗೆ ಸಂದೇಹ ಪರಿಹಾರಕ್ಕಾಗಿ ಸಂವಾದ ನಡೆಸಿದರು.

ವಿದ್ವತ್ ಪಿಯು ಕಾಲೇಜಿನ ಕೌನ್ಸೆಲಿಂಗ್ ಮುಖ್ಯಸ್ಥ ಗಂಗಾಧರ ಇ.ಮಂಡಗಳಲೆ, ಸಂಸ್ಥೆ ಸಂಸ್ಥಾಪಕಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಪ್ರಗತಿ ಆಪಲ್ ಎಜುಕೇಶನ್‌ನ ಮುಖ್ಯಸ್ಥ ವಿಜಯಕುಮಾರ್, ಟ್ರಸ್ಟಿ ಎಂ.ಕೆ ಕಾಶಿನಾಥ್ ಉಪಸ್ಥಿತರಿದ್ದರು.