This is masked man robber with stolen gold. 
ಜಿಲ್ಲೆ

ವಿಶೇಷ ತಂಡಗಳಿಂದ ತನಿಖೆ : ಪೆರ್ಮುದೆ ಚಿನ್ನಾಭರಣ ಕಳವು ಪ್ರಕರಣ

ಸೌಮ್ಯ ಆರ್

ಕಿನ್ನಿಗೋಳಿ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡಗಳಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯೊಳಗಿದ್ದ ಲಾಕರ್ ಒಡೆದು 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಪೊಲೀಸ್ ಮೂಲಗಳು ದೃಢಪಡಿಸಿವೆ. ಪ್ರಕರಣದ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಪತ್ತೆಗಾಗಿ ಮನೆ ಪರಿಸರದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಮನೆಗೆ ಸಂಬಂಧಿಸಿದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಮನೆಯಲ್ಲಿ 8 ಹೈಬ್ರಿಡ್, 3 ಲೋಕಲ್ ತಳಿಯ ನಾಯಿಗಳಿದ್ದರೂ ಘಟನೆ ವೇಳೆ ಅವೆಲ್ಲವೂ ಬೋನಿನೊಳಗೆ ಬಂಧಿಯಾಗಿದ್ದವು ಎಂದು ತಿಳಿದುಬಂದಿದೆ. 16 ಸಿಸಿ ಕ್ಯಾಮರಾಗಳಿದ್ದರೂ ತನಿಖಾ ತಂಡಕ್ಕೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.