ಹನುಮಸಾಗರದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ನಿಮಿತ್ತ ಶಾಂತಿ ಸಭೆಯಲ್ಲಿ ಸಿಪಿಐ ಯಶವಂತ ಬಿಸನಹಳ್ಳಿ ಮಾತನಾಡಿದರು. ಪಿಎಸ್‌ಐಗಳಾದ ವಿರುಪಾಕ್ಷಪ್ಪ ಶೆಟ್ಟರ, ಬಸಪ್ಪ ಲಮಾಣಿ, ಪಿಡಿಒ ದೇವೇಂದ್ರಪ್ಪ ಕಮತರ ಇದ್ದರು. 
ಜಿಲ್ಲೆ

ಅನುಮತಿ ಪಡೆಯುವುದು ಕಡ್ಡಾಯ

ಹನುಮಸಾಗರ: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಸೌಹಾರ್ದಯುತೆಯಿಂದ ಆಚರಣೆ ಮಾಡಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ತವಾಗಿ ಶುಕ್ರವಾರ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳಲ್ಲಿ ಅವಘಡಗಳು ಸಂಭವಿಸಿದ್ದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ.

ನೀವು ಹಬ್ಬ ಆಚರಣೆ ಮಾಡುವುದು ಇನ್ನೊಬರಿಗೆ ತೊಂದರೆಯಾಗಬಾರದು. ನಿಜವಾದ ಭಕ್ತಿ ದೇವರಿಗೆ ಸಮರ್ಪಿಸಬೇಕು. ಗಣೇಶನ ಮೂರ್ತಿ ಪ್ರತಿಷ್ಠಾಪಿಸುವಂತಹವರು ಕಡ್ಡಾಯವಾಗಿ ಪೊಲೀಸ್ ಇಲಾಖೆ ಸೇರಿ ಸಂಬಂಧಪಟ್ಟ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕು.

ಯಾರಾದರೂ ಕಾನೂನು ಬಾಹಿರ ಚಟುವಟಿಕೆ ನಡೆಸಲು ಪ್ರಯತ್ನಿಸುವುದು ಕಂಡು ಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡಿಬೇಕು ಎಂದರು.
ಪಿಎಸ್‌ಐಗಳಾದ ವೀರುಪಾಕ್ಷಪ್ಪ ಶೆಟ್ಟರ, ಬಸಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ,

ಪಿಡಿಒ ದೇವೇಂದ್ರಪ್ಪ ಕಮತರ, ಮುಖಂಡರಾದ ಬಸವರಾಜ ಹಳ್ಳೂರು, ಮಂಜುನಾಥ ಹುಲ್ಲೂರ, ವಿಶ್ವನಾಥ ಕನ್ನೂರ, ಸಂಗಮೇಶ ಕರಂಡಿ, ಮೈನೂದ್ಧಿನ್ ಖಾಜಿ, ಬಸವರಾಜ ದ್ಯಾವಣ್ಣನವರ, ರಮೇಶ ಬಡಿಗೇರ, ಶ್ರೀನಿವಾಸ ಜಹಗೀರದಾರ,
ನಾಗರಾಜ ಕಂದಗಲ್ಲ, ಗುರುರಾಜ ದೇಸಾಯಿ, ಸತೀಶ ಜಮಖಂಡಿಕರ ಇದ್ದರು.