ವಾರಾಹಿ ಕಾಲುವೆ ದುರಸ್ತಿ ಬಗ್ಗೆ ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನೆಗೆ ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉತ್ತರಿಸಿದರು 
ಜಿಲ್ಲೆ

ವಾರಾಹಿ ಕಾಲುವೆ ದುರಸ್ತಿಗೆ ಅನುಮತಿ ಪರಿಶೀಲನೆ: ಶಾಸಕ ಗಂಟಿಹೊಳೆ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರ

ಗಂಗೊಳ್ಳಿ: ಜಲಸಂಪನ್ಮೂಲ ಇಲಾಖೆ 2022-23ರಲ್ಲಿ ಅನುಮೋದನೆಗೊಂಡು ಪ್ರಸ್ತುತ ತಡೆಹಿಡಿದಿರುವ ಬೈಂದೂರು ವಾರಾಹಿ ಕಾಲುವೆ ದುರಸ್ತಿ ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ನಡೆಸಲು ಅನುಮತಿಗಾಗಿ ಪರಿಶೀಲಿಸುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಾರಾಹಿ ಕಾಲುವೆ ದುರಸ್ತಿ ಬಗ್ಗೆ ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದರು. 2022-23ನೇ ಸಾಲಿನಲ್ಲಿ ಅನುಮೋದನೆಗೊಂಡು ಸರ್ಕಾರದ ಸುತ್ತೋಲೆಯನ್ವಯ ತಡೆಹಿಡಿದಿರುವ ಉಡುಪಿ ಜಿಲ್ಲೆ ವಾರಾಹಿ ಕಾಲುವೆ ದುರಸ್ತಿ ಕಾಮಗಾರಿ ಅಗತ್ಯತೆ ಹಾಗೂ ಅನುದಾನ ಲಭ್ಯತೆ ಪರಿಗಣಿಸಿ ತಡೆಹಿಡಿದಿರುವ ನಾನ್ ಗ್ರೌಂಡೆಡ್ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ. ಎಸ್‌ಸಿಪಿ ಯೋಜನೆಯಡಿ ಹಂಚಿಕೆಯಾಗಿರುವ 1.5 ಕೋಟಿ ರೂ.ಗಳಲ್ಲಿ ನೀರಾವರಿ ಸೌಲಭ್ಯ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.