ಗುಜ್ಜಾಡಿ ನಾಯಕವಾಡಿ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮ ನಡೆಯಿತು.  
ಜಿಲ್ಲೆ

ನಿರಂತರ ಅಭ್ಯಾಸದಿಂದ ಪರಿಪೂರ್ಣತೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಸಾಹಿತ್ಯ, ಇನ್ಯಾವುದೇ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರಸ್ತುತಪಡಿಸಿದಾಗ ಅದು ಸೌಂದರ್ಯ ಕಂಡುಕೊಳ್ಳುತ್ತದೆ. ನಿರಂತರ ಅಭ್ಯಾಸ ನಮ್ಮನ್ನು ಪರಿಪೂರ್ಣವಾಗಿಸುತ್ತದೆ ಎಂದು ವಕೀಲ ಮುರುಡೇಶ್ವರ ಅಭಿಪ್ರಾಯಪಟ್ಟರು.

ಗುಜ್ಜಾಡಿ ನಾಯಕವಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ಸುವರ್ಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.

ಅಂತರ್ ಜಿಲ್ಲಾಮಟ್ಟದ ಕರೋಕೆ ಟ್ರಾೃಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ-2025 ಪ್ರಶಸ್ತಿ ಫಲಕಗಳನ್ನು ಕುಂದಾಪುರದ ಆದರ್ಶ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಡಾ.ಆದರ್ಶ ಹೆಬ್ಬಾರ್ ಅನಾವರಣಗೊಳಿಸಿದರು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಶುಭ ಹಾರೈಸಿದರು. ಸಾಧಕರನ್ನು ಸನ್ಮಾನಿಸಲಾಯಿತು. ಉದ್ಯಮಿ ಸುಭಾಷ್ ಶೆಟ್ಟಿ, ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಪಾಲ ಬಿಲ್ಲವ, ಜಾನಪದ ಕಲಾ ತರಬೇತುದಾರ ರಮೇಶ್ ಕಲ್ಮಾಡಿ, ಪ್ರವೀಣ್ ಶೆಟ್ಟಿ, ಯುವಕ ಮಂಡಲ ಅಧ್ಯಕ್ಷ ಶ್ರೀಧರ ಎನ್. ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರವಿ ಎನ್.ಜಿ.ಮೇಸ್ತ್ರಿ , ಉದಯ ಎನ್.ಕೆ. ಸ್ವಾಗತಿಸಿದರು. ಸಂಗಮೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ರಾಜು ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜ್ ಸನ್ಮಾನಿತರನ್ನು ಪರಿಚಯಿಸಿದರು. ನರೇಂದ್ರ ಎಸ್. ಗಂಗೊಳ್ಳಿ, ಸತ್ಯನಾ ಕೊಡೇರಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಎನ್.ಡಿ. ವಂದಿಸಿದರು.