ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಾಲಿನ್ಯಮುಕ್ತ ನವ ಕೇರಳ ಯೋಜನೆಯನ್ವಯ ಹಸಿರು ಕ್ರಾಂತಿಗಾಗಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆ ಸ್ನೇಹಿ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಹಸಿರು ಘೋಷಣೆ ಮೂಲಕ ಕಾಸರಗೋಡು ಜಿಲ್ಲೆಯನ್ನು ಕ್ರಾಂತಿಕಾರಿ ಬದಲಾವಣೆಯತ್ತ ಕೊಂಡೊಯ್ಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2,400 ಹಸಿರು ಸಂಸ್ಥೆ, 12024 ಹಸಿರು ನೆರೆಹೊರೆ ಗುಂಪು, ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕ, ಹಸಿರು ಕಾಲೇಜು, ಹಸಿರು ಪ್ರವಾಸೋದ್ಯಮ ಯೋಜನೆ ಜಾರಿಗೊಳಿಸಲಾಗುತ್ತಿದೆ. 2,400 ಹಸಿರು ಸ್ನೇಹಿ ಸಂಸ್ಥೆ, 636 ಹಸಿರು ಶಾಲೆ, 64 ಹಸಿರು ಕಾಲೇಜು, ಹಸಿರು ಕೇರಳ ಮಿಷನ್, ಶುಚಿತ್ವ ಮಿಷನ್, ಕುಟುಂಬಶ್ರೀ, ಸ್ಥಳೀಯ ಸ್ವ-ಸರ್ಕಾರಗಳ ಸಂಘಟಿತ ಚಟುವಟಿಕೆ ಪರಿಣಾಮವಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯನ್ವಯ 636 ಹಸಿರು ಶಾಲೆ, 64 ಹಸಿರು ಕಾಲೇಜು, 21 ಹಸಿರು ನಗರ, 88 ಸ್ವಚ್ಛ ಸಾರ್ವಜನಿಕ ಸ್ಥಳಗಳನ್ನು ಈಗಾಗಲೇ ಘೋಷಿಸಲಾಗಿದೆ.
ಯೋಜನೆಯನ್ವಯ 12,175 ನೆರೆಹೊರೆ ಕೂಟಗಳಲ್ಲಿ, 12,169 ಗ್ರೀನ್ ಗ್ರೇಡಿಂಗ್‌ಗೆ ಒಳಪಟ್ಟಿದ್ದರೆ, 12,024 ನೆರೆಹೊರೆಗಳು ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದೆ. ಪರಪ್ಪ(495), ಕಾಸರಗೋಡು(429), ನೀಲೇಶ್ವರ(391), ಮಂಜೇಶ್ವರ(363) ಬ್ಲಾಕ್ ಹಸಿರು ಸಂಸ್ಥೆಗಳ ಯೋಜನೆಯಲ್ಲಿ ಮುಂಚೂಣಿಯಲ್ಲಿದೆ.