ಸಿಂಧನೂರು ತಾಲೂಕಿನ ತುರ್ವಿಹಾಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್‌ನ್ನು ಆಯ್ದ ಫಲಾನುಭವಿಗಳಿಗೆ ವಿತರಿಸಲಾಯಿತು. ಡಾ.ಮಂಜುನಾಥ ಅಣಗೌಡ್ರ, ಕಂದಾಯ ನಿರೀಕ್ಷಕ ರಾಮಕೃಷ್ಣ, ಪಪಂ ಸದಸ್ಯ ಬಾಪುಗೌಡ ದೇವರಮನಿ, ಆರೋಗ್ಯ ಸುರಕ್ಷಾ ಅಧಿಕಾರಿ ಇಂದಿರಾ ಅಂಗಡಿ, ಭಾಗ್ಯಶ್ರೀ, ಶಿವನಗೌಡ ಆರ್.ತುರ್ವಿಹಾಳ, ಶರಣಬಸವ ಗಡೇದ್ ಇದ್ದರು. 
ಜಿಲ್ಲೆ

ಜನರ ಆರೋಗ್ಯಕ್ಕಾಗಿ ಯೋಜನೆಗಳು ಜಾರಿ

Kopala - Desk - Eraveni

ಸಿಂಧನೂರು: ಪ್ರಧಾನ ಮಂತ್ರಿ ಆಯುಷ್ಮಾನ್ ಹಾಗೂ ಭೀಮಾ ಯೋಜನೆಯ ಲಾಭ ಪಡೆದು ಆರೋಗ್ಯಕಾರ ಬದುಕು ಸಾಗಿಸಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಂಜುನಾಥ ಅಣಗೌಡ್ರ ಹೇಳಿದರು.

ತಾಲೂಕಿನ ತುರ್ವಿಹಾಳ ಪಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡದ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್ ವಿತರಣ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಯೋಜನೆಯ ಲಾಭ ಪಡೆಯಿರಿ

ಯೋಜನೆಯಡಿಯಲ್ಲಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಸಂಕೀರ್ಣ ದ್ವಿತೀಯ, ತೃತೀಯ ಹಂತದ ಚಿಕಿತ್ಸೆಗಳನ್ನು ಒದಗಿಸಲಾಗುವುದು. ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲದೆ, ಸಿಂಧನೂರಿನ ಆದರ್ಶ ಹಾಗೂ ಶಾಂತಿ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಉಚಿತ ಚಿಕಿತ್ಸೆ ಸಿಗಲಿದೆಂದರು.

ಕಂದಾಯ ನಿರೀಕ್ಷಕ ರಾಮಕೃಷ್ಣ, ಪಪಂ ಸದಸ್ಯ ಬಾಪುಗೌಡ ದೇವರಮನಿ, ಪ್ರಮುಖರಾದ ಶಿವನಗೌಡ ಆರ್.ತುರ್ವಿಹಾಳ, ಶರಣಬಸವ ಗಡೇದ್, ಅರವಿಂದರಡ್ಡಿ, ಶರಣಬಸವ ರಡ್ಡೆರ್, ಆರೋಗ್ಯ ಸುರಕ್ಷಾ ಅಧಿಕಾರಿ ಇಂದಿರಾ ಅಂಗಡಿ, ಭಾಗ್ಯಶ್ರೀ ಇದ್ದರು.