ಜಿಲ್ಲೆ

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಇಲ್ಲದಿದ್ರೆ ದಂಡ!

| ಕೀರ್ತಿನಾರಾಯಣ ಸಿ. ಬೆಂಗಳೂರು

2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ಗಳನ್ನು (ಎಚ್​ಎಸ್​ಆರ್​ಪಿ) ಅಳವಡಿಸಲು ನಿಗದಿ ಪಡಿಸಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ತೋರಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.

ಎಚ್​ಎಸ್​ಆರ್​ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು. ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 21 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ, ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಎಚ್​ಎಸ್​ಆರ್​ಪಿ ಹಾಕಿಸಲಾಗಿದೆ.

1950ರಿಂದಲೂ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಅವಧಿ ವಿಸ್ತರಣೆ ಮಾಡಿದರೂ ವಾಹನ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಗಡುವು ಮುಗಿದ ಬಳಿಕ ವಾಹನಗಳನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಾಗುತ್ತದೆ. ಮೊದಲನೆ ಬಾರಿ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 2000 ರೂ. ದಂಡ ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ಮೊದಲನೇ ಪುಟದಿಂದ...

ಹೀಗಾಗಿ ಫೆ.17ರ ಒಳಗೆ ಹಳೇ ವಾಹನಗಳಿಗೆ ನಿಯಮದಂತೆ ಎಚ್​ಎಸ್​ಆರ್​ಪಿ ಅಳವಡಿಸಿಕೊಂಡು ದಂಡ ಕಟ್ಟುವುದರಿಂದ ಬಚಾವಾಗಿ ಎಂದು ವಾಹನ ಮಾಲೀಕರಿಗೆ ಸಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ರಾಜ್ಯಾದ್ಯಂತ 4,000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ. ನಿರ್ದಿಷ್ಟ ನಿಯಮಗಳ ಅನ್ವಯ ನಂಬರ್ ಪ್ಲೇಟ್ ರೂಪಿಸಿರುವುದರಿಂದ ಸಾರಿಗೆ ಇಲಾಖೆ ಗುರುತಿಸಿರುವ ಡೀಲರ್ ಪಾಯಿಂಟ್​ಗಳಲ್ಲೇ ನಂಬರ್ ಪ್ಲೇಟ್ ಹಾಕಿಸಬೇಕು. ರಸ್ತೆಬದಿಯ ಗೂಡಂಗಡಿಗಳಲ್ಲಿ ಹಾಕಿಸಿದರೆ ಅಂತಹ ನಂಬರ್ ಪ್ಲೇಟ್​ಗಳಿಗೆ ಮಾನ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್​ಎಸ್​ಆರ್​ಪಿ ಪ್ಲೇಟ್ ಹಾಕಿಸುವುದೇಗೆ?: ಖ್ಟಚ್ಞಠಟಟ್ಟಠಿ.kಚ್ಟ್ಞಠಿಚkಚ.ಜಟಡ.ಜ್ಞಿ ಅಥವಾ ಡಿಡಿಡಿ.ಠಜಿಚಞ.ಜ್ಞಿಗೆ ಭೇಟಿ ಕೊಟ್ಟು ಬುಕ್ ಎಚ್​ಎಸ್​ಆರ್​ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.

ಫೆ.17ಕ್ಕೆ ಎಚ್​ಎಸ್​ಆರ್​ಪಿ ಗಡುವು ಮುಗಿಯುತ್ತಿದೆ. ಅಷ್ಟರಲ್ಲಿ ಹಾಕಿಸಿ ಕೊಳ್ಳದಿದ್ದರೆ ಸಂಚಾರ ಪೊಲೀಸರು ಹಾಗೂ ಆರ್​ಟಿಒ ಅಧಿಕಾರಿಗಳು ಜಂಟಿಯಾಗಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಿದ್ದಾರೆ.

| ಸಿ .ಮಲ್ಲಿಕಾರ್ಜುನ ಸಾರಿಗೆ ಇಲಾಖೆ ಅಪರ ಆಯುಕ್ತ