ಬಂಟ್ವಾಳ: ಇಲ್ಲಿನ ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯಾಪ್ತಿಯ ಚೆನ್ನೈತೋಡಿ ಗ್ರಾಮದ ಪೆಜಕಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ 1 ಲಕ್ಷ ರೂ. ಮೊತ್ತದ ಚೆಕ್ಕನ್ನು ಯೋಜನೆ ನಿರ್ದೇಶಕ ಮಹಾಬಲ ಕುಲಾಲ್ ಗುರುವಾರ ಹಸ್ತಾಂತರಿಸಿದರು.
ಜಿಲ್ಲಾದ್ಯಂತ ಬಹುತೇಕ ಹೆಚ್ಚಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಧರ್ಮಸ್ಥಳ ಕ್ಷೇತ್ರದಿಂದ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ನೆರವು ಸಿಕ್ಕಿದ ಪರಿಣಾಮ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಯೋಜನಾಧಿಕಾರಿ ಬಾಲಕೃಷ್ಣ, ಜನಜಾಗೃತಿ ವೇದಿಕೆ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ, ಆನಂದ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್, ದೇವಸ್ಥಾನದ ಅರ್ಚಕ ರಾಧಾಕೃಷ್ಣ ಭಟ್, ಆಡಳಿತ ಸಮಿತಿ ಅಧ್ಯಕ್ಷ ಅರುಣ್ ಐತಾಳ್, ಒಕ್ಕೂಟ ಅಧ್ಯಕ್ಷ ಕುಶಲ, ನಿಕಟಪೂರ್ವ ಅಧ್ಯಕ್ಷ ಬೂಬ ನಾಯಕ್, ಸಂಘದ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಇದ್ದರು.