ಮಾನ್ವಿ: ತಾಲೂಕಿನ ಉಟಕನೂರು ಗ್ರಾಪಂ ಅಧ್ಯಕ್ಷರ ಗಮನಕ್ಕೆ ತರದೆ ಹೊರಗುತ್ತಿಗೆ ಸಿಬ್ಬಂದಿ ಹೆಸರಿನಲ್ಲಿ ಪಿಡಿಒ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಶುಕ್ರವಾರ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ: ನಂಬಿಹಳ್ಳಿ ಗ್ರಾಪಂ ಪಿಡಿಒ ಮಂಜುನಾಥ್ ಅಮಾನತು
ದಸಂಸ ತಾಲೂಕು ಸಂಚಾಲಕ ರಂಜಿತ್ ಕೊಡ್ಲಿ ಮಾತನಾಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರೆಕಾಲಿಕ ನ್ಯಾಯಿಕ ನ್ಯಾಯಾಲಯ 2023ರ ನ.22ರಂದು ನೀಡಿದ ಆದೇಶದಲ್ಲಿ ಉಟಕನೂರು ಗ್ರಾಪಂ ಅಧ್ಯಕ್ಷೆ ಈರಮ್ಮ ಅಮರಪ್ಪಗೆ ಹಣಕಾಸು ವ್ಯವಹಾರ ಮಾಡದಿರಲು ಹಾಗೂ ಯಾವುದೇ ಚೆಕ್‌ಗಳಿಗೆ ಸಹಿ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದ ನಂತರ ಪಿಡಿಒ ಶ್ವೇತಾ ಕುಲಕರ್ಣಿ ಬಾಪೂಜಿ ಸೇವಾ ಕೇಂದ್ರ,
ಕರವಸೂಲಿ, ವಿದ್ಯುತ್ ಖಾತೆ, ಸಿಬ್ಬಂದಿ ಖಾತೆ ಸೇರಿ ಹಲವು ಖಾತೆಗಳಲ್ಲಿನ ಅನುದಾನ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತರದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ತಾಪಂ ಇಒ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಖಜಾಂಚಿ ಅಮರನಾಥ, ಪ್ರಮುಖರಾದ ಅನಿಲ್ ಧೋತರಬಂಡಿ, ದ್ಯಾವಣ್ಣ, ಎಸ್.ಎಂ.ಪಾಟೀಲ್ ಉದ್ಬಾಳ, ಮೌನೇಶ ನಾಯಕ, ಮಲ್ಲಪ್ಪ, ದೇವಣ್ಣ, ಬಸವಲಿಂಗಪ್ಪ ಉದ್ಬಾಳ, ಕುಪ್ಪಮ್ಮ, ಬಸವ ನಿಲಗಲ್, ಸೋಮಲಿಂಗಪ್ಪ, ವೆಂಕಟೇಶ, ಅಜಿತ್, ಬಸವ ಬಗಲವಾಡ, ದೇವಣ್ಣ ಸಾಹುಕರ್ ಇತರರಿದ್ದರು.