ಹರಪನಹಳ್ಳಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ರವಿಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಇಬ್ರಾಹಿಂ ಸಾಬ್, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಅಂಜಿನಪ್ಪ, ಎಇಇ ಇಂಜಿನಿಯರ್ ರಾಘವೇಂದ್ರ ಇತರರಿದ್ದರು. 
ಜಿಲ್ಲೆ

ಶಿಕ್ಷಣ-ಆರೋಗ್ಯದ ಕಡೆ ಗಮನಹರಿಸಿ

Kopala - Desk - Eraveni

ಹರಪನಹಳ್ಳಿ: ವಿಜಯನಗರ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಎರಡು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಲಿಫ್ಟ್ ಅಳವಡಿಸಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದಲ್ಲಿ ಕಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೆ.ಎಚ್.ಬಿ.ಕಾಲನಿಯಲ್ಲಿ 491.72ಲಕ್ಷ ರೂ. ಮತ್ತು ಬಸ್ ಡಿಪೋ ಹಿಂಭಾಗದಲ್ಲಿ 650 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಹರಪನಹಳ್ಳಿಯಲ್ಲಿ 11 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಹಳ್ಳಿಗಳಿಂದ ಬರುವವರೆ ಹೆಚ್ಚು, ಹೆಚ್ಚಿನ ಹಾಸ್ಟೆಲ್ ಅವಶ್ಯಕತೆ ಇದೆ. ತಾಲೂಕಿನಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಹಾಸ್ಟೆಲ್ ಕೊಠಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಲಿಫ್ಟ್ ನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದರು.

ಸಮಾಜ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಮಾತನಾಡಿ, ತಾಲೂಕಿಗೆ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಿದ್ದಾರೆ. ಇನ್ನೂ ಹೆಚ್ಚಿನ ಹಾಸ್ಟೆಲ್‌ಗಳ ಅವಶ್ಯಕತೆಯಿದೆ. ಹಾಸ್ಟೆಲ್ ಮುಂಭಾಗದಲ್ಲಿ ತಗ್ಗು ಪ್ರದೇಶವಿದ್ದು, ಮಳೆ ಬಂದರೆ ನೀರು ನಿಂತು ಕೆರೆಯಂತಾಗುತ್ತದೆ ಇದನ್ನು ಸರಿಪಡಿಸಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಪುರಸಭೆ ಅಧ್ಯಕ್ಷೆ ಪಾತೀಮಾಭೀ, ಪ್ರಮುಖರಾದ ಮೈದೂರು ಒ.ರಾಮಪ್ಪ, ವಿಜಯಲಕ್ಷ್ಮೀ, ಲಾಟಿ ದಾದಾಪೀರ್, ಒ.ಮಹಾಂತೇಶ್, ನಿಲಯ ಪಾಲಕರಾದ ಎನ್.ಜಿ.ಬಸವರಾಜ, ಶಿವುಕುಮಾರ್, ಸುನೀತ, ಸುಮಾ, ಯಲ್ಲಮ್ಮ, ರವಿಗೌಡ, ಮಂಜುನಾಥ, ದೇವೇಂದ್ರಪ್ಪ, ಮಹಾದೇವಪ್ಪ ಇತರರಿದ್ದರು.