ಜಿಲ್ಲೆ

ಈ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ

Avinash R

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ಪಾವಂಜೆ- ಕೊಳುವೈಲು ನಡುವಿನ ಕಾಂಕ್ರೀಟ್ ರಸ್ತೆ ಕುಸಿತವಾಗಿದ್ದು, ಗ್ರಾಮಸ್ಥರಿಗೆ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ಕಾಂಕ್ರೀಟ್ ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳು ಸೃಷ್ಟಿಯಾಗಿ ಅಪಾಯಕಾರಿಯಾಗಿದೆ. ಹೊಂಡದ ಇಕ್ಕೆಲಗಳಲ್ಲಿ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಮರಳು ತುಂಬಿದ ಲಾರಿಗಳ ಸಂಚಾರದಿಂದ ರಸ್ತೆ ಕುಸಿತಗೊಂಡಿದ್ದು, ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸಣ್ಣ ವಾಹನಗಳು ಈ ಹೊಂಡದಲ್ಲಿ ಬೀಳಬಾರದೆಂದು ಹೊಂಡಕ್ಕೆ ತೆಂಗಿನ ಗರಿ ಇಡಲಾಗಿದೆ. ಈ ರಸ್ತೆಯಲ್ಲಿ ಇನ್ನಷ್ಟು ಭಾರವಾದ ವಾಹನಗಳು ಸಂಚರಿಸಿದರೆ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.

ಕೂಡಲೇ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಭಾರವಾದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ಒಡೆದು ವಾಹನ ಚಾಲನೆಗೆ ಸಮಸ್ಯೆಯಾಗಿತ್ತು. ಆದರೆ ಇದೀಗ ರಸ್ತೆ ಮಧ್ಯೆ ಹೊಂಡ ಬಿದ್ದಿದೆ. ಹೀಗೆ ಮುಂದುವರಿದರೆ ರಸ್ತೆ ಸಂಪೂರ್ಣ ನಾಶವಾಗುವ ಭೀತಿ ಇದೆ. ನಾರಾಯಣ ಸಾಲ್ಯಾನ್, ರಿಕ್ಷಾ ಚಾಲಕರು ರಸ್ತೆ ಒಡೆದಿರುವುದು ತಿಳಿದು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಪಂಚಾಯಿತಿ ವತಿಯಿಂದ ಸಾಧ್ಯವಾಗುವ ಕ್ರಮ ಕೈಗೊಳ್ಳಲಾಗುವುದು. ಪೂರ್ಣಿಮಾ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ