ಮಂಜೇಶ್ವರ: ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವ ಕುಳೂರು ಶ್ರೀಹರಿ ಭಜನಾ ಮಂದಿರದಲ್ಲಿ ಉಪ್ಪಳ ಟಕದ ಗೌರವಾಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೇಲು ಕುಳೂರು ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಣೇಶ ನಾವಡ ಮೀಯಪದವು, ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಾಣ ತೊಟ್ಟೆತ್ತೋಡಿ, ಯಕ್ಷಗಾನ ಗುರುರಾಮ ಸಾಲ್ಯಾನ್, ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ ದಾಮೋದರ ಶೆಟ್ಟಿ, ಶ್ರೀಹರಿ ಭಜನಾ ಮಂದಿರದ ಅಧ್ಯಕ್ಷೆ ಕುಳೂರು ಪಾದೆ ಕೃಷ್ಣವೇಣಿ ಡಿ.ಶೆಟ್ಟಿ ಉಪಸ್ಥಿತರಿದ್ದರು.
ಟಕದ ಸಂಚಾಲಕ ಯೋಗೀಶ್ ರಾವ್ ಚಿಗುರುಪಾದೆ ಸ್ವಾಗತಿಸಿ, ಜಯಪ್ರಕಾಶ್ ವಂದಿಸಿದರು. ಬಳಿಕ ಶ್ರೀಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಶ್ರೀಹರಿ ಲೀಲಾಮೃತ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.