ಜಿಲ್ಲೆ

ಪಾಸ್​ಪೋರ್ಟ್- ಬೋರ್ಡಿಂಗ್​ ಪಾಸ್​ ಕೊಟ್ಟು ಮದ್ವೆಗೆ ಆಹ್ವಾನಿಸಿದ ನವಜೋಡಿ! ಸಖತ್​ ವೈರಲ್​ ಆಗ್ತಿದೆ ಈ ಮದ್ವೆ

arunakunigal

ಬೆಳಗಾವಿ: ಕ್ರಿಯೇಟಿವಿಟಿ ಅನ್ನೋದು ಮದ್ವೆ ಆಮಂತ್ರಣ ಪತ್ರಿಕೆಯ್ಲಲೂ ಭಾರಿ ಸದ್ದು ಮಾಡುತ್ತಿದೆ. ಆಧಾರ ಕಾರ್ಡ್, 2 ಸಾವಿರ ರೂಪಾಯಿ ನೋಟು, ಪಡಿತರ ಚೀಟಿ, ದಿನ ಪತ್ರಿಕೆ, ಮ್ಯಾಗಝೈನ್​, ಲವ್​ ಬರ್ಡ್​, ಹೂವು, ಆಭರಣದ ಬಾಕ್ಸ್​ ಮಾದರಿಯ ಆಮಂತ್ರಣ ಪತ್ರಿಗಳನ್ನು ಇದುವರೆಗೂ ನೋಡಿದ್ದೀರಿ. ಇದೀಗ ಬೆಳಗಾವಿಯಲ್ಲಿ ನವಜೋಡಿಯೊಂದು ವಿನೂತನವಾಗಿ ಆಮಂತ್ರಣ ಪತ್ರಿಕೆ ನೀಡಿ ಮದ್ವೆಗೆ ಆಹ್ವಾನಿಸುತ್ತಿದೆ. ಆ ಇನ್ವಿಟೇಷನ್​ ಕಾರ್ಡ್​ನಲ್ಲೇನಿದೆ ವಿಶೇಷ ಅಂತೀರಾ?

ಬೆಳಗಾವಿಯ ಅನಗೋಳದ ನಿವಾಸಿ ಧರ್ಮರಾಜ್ ಪಾಟೀಲ್ ಮತ್ತು ರೀಚಿತಾ ಮದುವೆ ಫೆ.28ರಂದು ನಿಶ್ಚಯವಾಗಿದ್ದು, ಈ ಜೋಡಿ ವಿಮಾನ ಪ್ರಯಾಣಿಕರ ಪಾಸ್ ಪೋರ್ಟ್-ಬೋರ್ಡಿಂಗ್ ಪಾಸ್ ಕೊಟ್ಟು ಸಂಬಂಧಿಕರು ಮತ್ತು ಸ್ನೇಹಿತರನ್ನು ಮದ್ವೆಗೆ ಆಹ್ವಾನಿಸುತ್ತಿದೆ.

ಅರೆ, ಮದ್ವೆಗೆ ಬನ್ನಿ ಅಂತ ಪಾಸ್​ಪೋರ್ಟ್​ ಕೊಟ್ಟು ಕರೀತಿದ್ದಾರಾ ಎಂದು ಉಬ್ಬೇರಿಸಬೇಡಿ. ಇದು ಪಾಸ್​ಪೋರ್ಟ್ ಮತ್ತು ಬೋರ್ಡಿಂಗ್ ಪಾಸ್ ಮಾದರಿಯಲ್ಲಿರುವ ಮದ್ವೆ ಆಮಂತ್ರಣ ಪತ್ರಿಕೆ! ಬೋರ್ಡಿಂಗ್ ಪಾಸ್, ವೆಡ್ಡಿಂಗ್​ ಏರ್​ಲೈನ್​, ಪಾಸ್​ಪೋರ್ಟ್ to ಮ್ಯಾರೇಜ್, ಸೀಟ್-ವಿಐಪಿ, ಪ್ಯಾಸೆಂಜರ್ ನೇಮ್..., ಬೋರ್ಡಿಂಗ್ ಟೈಮ್ (ಮುಹೂರ್ತ ಸಮಯ), ಡೆಸ್ಟಿನೇಷನ್, ಲೋಕೇಷನ್ (ಮದ್ವೆ ನಡೆಯುವ ಸ್ಥಳ) ಎಲ್ಲವನ್ನೂ ಡಿಫರೆಂಟ್​ ಆಗಿ ಮುದ್ರಿಸಿದ್ದಾರೆ. ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.