ಜಿಲ್ಲೆ

ಶಾಸ್ತ್ರೀಯ ಸಂಗೀತ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣ

ಇಂದಿರಾ ಎನ್ ಕೆ

ಗಂಗೊಳ್ಳಿ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಆಶ್ರಯದಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಮನ್ವಿತಾ ಬಿ.ವಿ. ತ್ರಾಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಶೇ.88.75ರಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಲಾವಣ್ಯ ಶ್ರೀಧರ ಶೆಟ್ಟಿಗಾರ್ ತ್ರಾಸಿ ಅವರ ಶಿಷ್ಯೆಯಾಗಿದ್ದು, ತ್ರಾಸಿ ವಿಜಯ ಶೆಟ್ಟಿಗಾರ್ ಮತ್ತು ಭುವನೇಶ್ವರಿ ದಂಪತಿ ಪುತ್ರಿ.