ಜಿಲ್ಲೆ

ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಪ್ರಗತಿ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿ ಗ್ರಾಮ ಸಮಿತಿ ಪದಗ್ರಹಣ ಅದ್ದೂರಿಯಾಗಿ ನಡೆದಿರುವುದು ಎಲ್ಲರಿಗೂ ಮಾದರಿ. ಹೆಬ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ನಿರಂತರವಾಗಿ ಅಧಿಕಾರಕ್ಕೆ ಬರುತ್ತಿದೆ. ಅದು ನಿರಂತರವಾಗಿ ನಡೆಯಬೇಕು ಗ್ರಾಮದಿಂದ ಕೇಂದ್ರದ ತನಕವೂ ಬಿಜೆಪಿಯೇ ಅಧಿಕಾರದಲ್ಲಿರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಮುಖಂಡ ಕಾರ್ಕಳ ಮಣಿರಾಜ ಶೆಟ್ಟಿ ಹೇಳಿದರು.

ಹೆಬ್ರಿಯಲ್ಲಿ ಗುರುವಾರ ಬಿಜೆಪಿ ಕಾರ್ಕಳ ಮಂಡಲ ಹೆಬ್ರಿ ಗ್ರಾಮ ಸಮಿತಿ ನೂತನ ಅಧ್ಯಕ್ಷ ಅರುಣ್ ಶೆಟ್ಟಿ ಕನ್ಯಾನ ಮತ್ತು ಕಾರ್ಯದರ್ಶಿ ಸುರೇಶ ಭಂಡಾರಿ ಹೆಬ್ರಿ ತಂಡದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಬಿಜೆಪಿ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ ಶೆಟ್ಟಿ, ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ ಶೆಟ್ಟಿ ಮಾತನಾಡಿದರು. ಹೆಬ್ರಿ ಗ್ರಾಮ ಸಮಿತಿ ವಾರ್ಡ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಉದಯ ಅಜೆಕಾರು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಹೆಬ್ರಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ ಬಂಗೇರ, ರಾಜ್ಯ ಯುವ ಮೋರ್ಚಾದ ವಿಖ್ಯಾತ್ ಶೆಟ್ಟಿ, ಪಕ್ಷದ ವಿವಿಧ ಘಟಕ ಮುಖಂಡರಾದ ಸುರೇಂದ್ರ ಕುಲಾಲ್ ವರಂಗ, ಗಣಪತಿ ಮುದ್ರಾಡಿ, ಶಿವಪ್ರಸಾದ್ ಕೋಟ್ಯಾನ್, ಸುಧಾಕರ ಹೆಗ್ಡೆ, ನರೇಂದ್ರ ನಾಯಕ್, ಮುಟ್ಲುಪಾಡಿ ಸತೀಶ ಶೆಟ್ಟಿ, ಸತೀಶ ಪೂಜಾರಿ ಬೋಳ, ಜ್ಯೋತಿ ಹರೀಶ್, ವೀಣಾ ಪ್ರಭು, ರಾಕೇಶ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಬಿಜೆಪಿ ನಾಯಕರು ಭಾಗವಹಿಸಿದ್ದರು.