ಗಂಗೊಳ್ಳಿ: ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ಪಾಲಕರ ಸಭೆ ಗುರುವಾರ ನಡೆಯಿತು.
ಶಾಲೆಯ ಜಂಟಿ ಕಾರ್ಯದರ್ಶಿ ಗ್ರೇಸಿ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿಗಳಾದ ನಾವುಂದ ಪದವಿ ಪೂರ್ವ ಕಾಲೇಜಿನ ಸಹಶಿಕ್ಷಕ ಕರುಣಾಕರ ಶೆಟ್ಟಿ ಅವರು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಿಸುವುದು ಪಾಲಕರ ಮಹತ್ತರ ಜವಾಬ್ದಾರಿ ಇದೆ ಎಂದರು.
ಉಭಯ ಶಾಲೆಗಳ ಮುಖ್ಯಶಿಕ್ಷಕಿಯರಾದ ಕ್ರೆಸೆನ್ಸ್ ಮತ್ತು ವಿಜಯಾ ಉಪಸ್ಥಿತರಿದ್ದರು. ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆಯಾಗಿ ಶಾಂತಿ ಖಾರ್ವಿ, ಸದಸ್ಯರಾಗಿ ಭಾಸ್ಕರ್ ಖಾರ್ವಿ, ಶ್ರೀಧರ ಖಾರ್ವಿ, ನವೀನ ಶೆಟ್ಟಿ, ರಾಮ ಖಾರ್ವಿ, ದಿನೇಶ ಖಾರ್ವಿ, ರೇಣುಕಾ, ಶಶಿಕಲಾ, ಕವಿತಾ ಆಯ್ಕೆಯಾದರು.
ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಸ್ವಾಗತಿಸಿದರು. ಶಿಕ್ಷಕ ಗಣೇಶ ಹೆಬ್ಬಾರ್ ವಂದಿಸಿದರು. ದಿವ್ಯ ಭಾರತಿ ನಿರೂಪಿಸಿದರು.