ಜಿಲ್ಲೆ

ಭರವಸೆಯಲ್ಲಿ‌ 'ವಿರಾಟ್ ಸಮಾವೇಶ' ತಾತ್ಕಾಲಿಕ ಅಂತ್ಯ: ಡಿ.29ರಂದು ಮೀಸಲಾತಿ ಅಂತಿಮ‌ ನಿರ್ಣಯ

arunakunigal

ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟದ ಕೊನೆಯ ವಿರಾಟ್ ಸಮಾವೇಶ ಗುರುವಾರ ರಾಜ್ಯ ಸರ್ಕಾರದ ಭರವಸೆಯಲ್ಲಿ ಅಂತ್ಯಗೊಂಡಿತು.

ಬೆಳಗಾವಿ ಸುವರ್ಣ ವಿಧಾನಸೌದ ‌ಬಳಿ ರಾಘವೇಂದ್ರ ಬಡಾವಣೆ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ವಿರಾಟ್ ಸಮಾವೇಶದಲ್ಲಿ 20 ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು.

ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಪಂಚಮಸಾಲಿ ಸಮಾಜ ಹಿಂದುಳಿದಿದ್ದು, ಮೀಸಲಾತಿ ಕೊಡಬಹುದು ಎಂದು ಉಲ್ಲೇಖಿಸಿದ್ದು ಡಿ.28ರಂದು ಸರ್ವ ಪಕ್ಷಗಳ ಸಭೆ ಕರೆದು ಡಿ.29ರಂದು ಸಚಿವ ಸಂಪುಟದಲ್ಲಿ ‌ಚರ್ಚಿಸಿ ಮೀಸಲಾತಿ ಘೋಷಣೆ ‌ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಈ ಹಿನ್ನೆಲೆ ಮೃತ್ಯುಂಜಯ ಸ್ವಾಮೀಜಿ ಮತ್ತು ಸಮಾಜದ ಮುಖಂಡರು ತಾತ್ಕಾಲಿಕವಾಗಿ ಹೋರಾಟ ಕೈ ಬಿಟ್ಟರು.

ಇದೇ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯಲ್ಲಿ ಪಂಚಮಸಾಲಿ ಸಮಾಜ ಹಿಂದುಳಿದಿದ್ದು,‌ ಮೀಸಲಾತಿ ಕೊಡಬಹುದು ಎಂದು ಉಲ್ಲೇಖಿಸಿದೆ. ಸರ್ಕಾರ ಕೂಡ ವರದಿ ಒಪ್ಪಿಕೊಂಡಿದೆ. ಗುರುವಾರ ಸಚಿವ ಸಂಪುಟದಲ್ಲಿ ಚರ್ಚಿಸಿ ಮೀಸಲಾತಿ ಘೋಷಣೆ ಮಾಡಲಾಗುವುದು. ಅಲ್ಲದೆ, ಕೇಂದ್ರ ಸರ್ಕಾರದ‌ ಮೀಸಲಾತಿ ಪಟ್ಟಿಯಲ್ಲಿ ಸಮಾಜಕ್ಕೆ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.