ಜಿಲ್ಲೆ

ಆರ್ಥಿಕ ಹೊರೆ ನಿವಾರಿಸಲು ಪಂಚ ಗ್ಯಾರಂಟಿ

Avinash R

ಬಂಟ್ವಾಳ: ಜನರ ಆರ್ಥಿಕ ಹೊರೆ ನಿವಾರಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಯೋಜನೆಯಿಂದ ಮಹಿಳೆಯರಿಗೆ ಅರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ ಎಂದು ವಾಜಿ ಸಚಿವ ಬಿ.ರವಾನಾಥ ರೈ ಹೇಳಿದರು.

ಬಂಟ್ವಾಳ ತಾಲೂಕಿನ ನ್ನೈತ್ತೋಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಮಂಗಳವಾರ ನಡೆದ ಪಂಚ ಗ್ಯಾರಂಟಿ ವಿಲೇವಾರಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅನುಷ್ಠಾನ ಸಮಿತಿ ದ.ಕ.ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ. ಮುಖ್ಯಾಧಿಕಾರಿ ಸಚಿನ್, ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಯೋಜನೆಯ ಅನುಷ್ಠಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಜಯಂತಿ, ಅನುಷ್ಠಾನ ಸಮಿತಿ ಜಿಲ್ಲಾ ಉಪಾದ್ಯಕ್ಷ ಜೋಕಿಂ ಡಿಸೋಜ, ಬೆಳ್ತಂಗಡಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ವಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕಷ್ಣ ಅಂಚನ್, ಅರಳ ಪಿಡಿಒ ಧರ್ಮರಾಜ್, ಪಿಲಾತಬೆಟ್ಟು ಪಿಡಿಒ ಯಮುನಪ್ಪ., ಇರ್ವತ್ತೂರು ಪಿಡಿಒ ನಿಶಾಂತ್, ಅನುಷ್ಠಾನ ಸಮಿತಿ ಸದಸ್ಯರಾದ ಡಾ.ಸುರೇಶ್, ಚಂದ್ರಶೇಖರ ಆಚಾರ್ಯ, ಸುಧೀಂದ್ರ ಶೆಟ್ಟಿ, ಮಹಮ್ಮದ್ ಸಿರಾಜ್, ಸತೀಶ್, ಮುರಳೀಧರ ಪೈ, ವಿನಯ್ ಕುವಾರ್, ಕಾಂಚಲಾಕ್ಷಿ, ಹರ್ಷನ್ ಬಿ., ಪವಿತ್ರಾ ಕೆ., ಅಬ್ದುಲ್ ಮಜೀದ್, ಜನಾರ್ದನ, ಕೃಷ್ಣಪ್ಪ ಪೂಜಾರಿ, ಅಬ್ದುಲ್ ಕರೀಂ, ನಾರಾಯಣ ನಾಯ್ಕ, ಗ್ರಾ.ಪಂ. ಸದಸ್ಯರಾದ ಪ್ರಮುಖರಾದ ಮಲ್ಲಿಕಾ ಶೆಟ್ಟಿ, ಲವಿನಾ ಮೋರಾಸ್, ಗ್ರಾ.ಪಂ.ಸದಸ್ಯರಾದ ಉದಯ ಕುವಾರ್ ಶೆಟ್ಟಿ, ರವಾನಂದ ಬೆದ್ರಕಾಡು, ಅಣ್ಣು ಪೂಜಾರಿ, ರೇಖಾ, ಆನಂದ ಆಚಾರ್ಯ, ನಾಗೇಶ್, ಜಯಂತಿ ಪೂಜಾರಿ, ಲಿತೇಶ್, ಭಾರತಿ ಗಟ್ಟಿ, ನೆಲ್ವಿಸ್ಟರ ಪಿಂಟೊ, ಪುಷ್ಪಲತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಹಿತ ಮತ್ತಿತರರಿದ್ದರು.

ಪಿಡಿಒ ಜೋಯಲ್ ಪ್ರಶಾಂತ್ ಫೆಲಿರೊ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ನವೀನಚಂದ್ರ ಶೆಟ್ಟಿ ಮತ್ತು ಭರತ್ ಕುವಾರ ಜೈನ್ ನಿರೂಪಿಸಿದರು. ಭಾರತಿ ರಾಜೇಂದ್ರ ವಂದಿಸಿದರು.