ಹಳೆಯಂಗಡಿ: ಗ್ರಾಮೀಣ ಜನರ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಸಂಘವು ಮುಂದಿನ ದಿನಗಳಲ್ಲಿ ಬಂಡವಾಳ ಅಭಿವೃದ್ಧಿ ಸಹಿತ ನೂತನ ಆಡಳಿತ ಕಟ್ಟಡ ನಿರ್ಮಾಣ ಯೋಜನೆ ಹಮ್ಮಿಕೊಂಡಿದೆ ಎಂದು ಸಂಘ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಹೇಳಿದರು.
ಎಚ್.ನಾರಾಯಣ ಸನಿಲ್ ಸಭಾಭವನದಲ್ಲಿ ಭಾನುವಾರ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ(ನಿ)ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸತತ ಆರನೇ ಬಾರಿಗೆ ಜಿಲ್ಲಾ ಪ್ರೋತ್ಸಾಹಕರ ಪ್ರಶಸ್ತಿ ಪಡೆದ ಪಡುಪಣಂಬೂರು ವ್ಯವಸಾಯ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಸತೀಶ್ ಭಟ್ ಅವರನ್ನು ಗೌರವಿಸಲಾಯಿತು.
ಸಂಘದ ಸದಸ್ಯರಿಗೆ ಶೇ.19 ಡಿವಿಡೆಂಡ್ ವಿತರಿಸಲಾಯಿತು.
ಸಂಘ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಸಂತ್ ಬೆರ್ನಾಡ್, ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್ ಶೆಟ್ಟಿ, ಯೋಗೀಶ್ ಪಾವಂಜೆ, ಮೀರಾ ಬಾಯಿ.ಕೆ, ರೋಹಿಣಿ ಬಿ ಶೆಟ್ಟಿ, ಅಶೋಕ್ ಬಂಗೇರ, ಮುಖೇಶ್ ಸುವರ್ಣ, ದಿವ್ಯ, ಶಂಕರ, ರಾಜೇಶ್.ಎಸ್.ದಾಸ್, ಕಿರಣ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಹಿಮಕರ ಮತ್ತಿತರರು ಉಪಸ್ಥಿತರಿದ್ದರು.
ಸಂಘ ಸದಸ್ಯರಾದ ಮಹಾಬಲ ಸಾಲ್ಯಾನ್, ವಾಹಿದ್ ತೋಕೂರು, ಅಬ್ದುಲ್ ಖಾದರ್, ಹ್ಯಾರಿಸ್ ನವರಂಗ್, ಧರ್ಮಾನಂದ ಶೆಟ್ಟಿಗಾರ್, ಸುಗಂಧಿ ದಿನೇಶ್ ಕೊಂಡಾಣ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.
ಸಂಘ ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಸ್ವಾಗತಿಸಿ,ಉಪಕಾರ್ಯದರ್ಶಿ ಶ್ರೀಕಾಂತಿ ಧನ್ಯವಾದ ಅರ್ಪಿಸಿದರು.