ಜಿಲ್ಲೆ

ಪಡ್ತಿ ಪ್ರೀಮಿಯರ್ ಲೀಗ್ ಮಾರ್ಚ್ 6 ರಿಂದ

Uttara Kannada - Subash Hegde

ಕಾರವಾರ: ಪಡ್ತಿ ಸಮಾಜ ಪ್ರೀಮಿಯರ್ ಲೀಗ್ (ಪಿಪಿಎಲ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 6 ರಿಂದ 10 ರವರೆಗೆ ಬಾಡ ಚಂದ್ರಾದೇವಿವಾಡದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಮುರಳೀಧರ ಗೋವೇಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಚಂದ್ರಾದೇವಿ ಸ್ಪೋರ್ಟ್ಸ್ ಕ್ಲಬ್, ಎನ್ ಬಿಸಿ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದರು.

ಹಿನ್ನೀರಿನಲ್ಲಿ ಮೀನುಗಾರಿಕೆ ಮಾಡಿ ವಾಸಿಸುವ ಕಾರವಾರ, ಅಂಕೋಲಾದಲ್ಲಿ ಮಾತ್ರ ಇರುವ ಸಣ್ಣ ಸಮಾಜ ನಮ್ಮದು. ಹಿಂದಿನಿಂದ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಿದ್ದರೂ ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಮಾಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.
6 ತಂಡಗಳಿದ್ದು 150 ಆಟಗಾರರನ್ನು ಹರಾಜು ಹಾಕಿ 108 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಚಂದ್ರಾದೇವಿ ಟೈಗರ್ಸ್, ಅಮ್ಚ ಸೂಪರ್ ಕಿಂಗ್ಸ್ ಅಮದಳ್ಳಿ, ಅಸ್ನೋಟಿ ಟೈಗರ್ಸ್, ಮಲ್ಲಿಕಾರ್ಜುನ ನಿರಾಕಾರ ಕಡವಾಡ, ಓಂಸಾಯಿ ತಂಡ ಹಳಗೇಜೂಗ್, ರಾಮ ಬೇತಾಳ ವಾರಿಯರ್ಸ್‌ ಮಾಜಾಳಿ ಎಂಬ ತಂಡಗಳು ಆಡಲಿವೆ. ಪ್ರತಿ ತಂಡದಲ್ಲಿ 18 ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸಮಾಜದ ನಿವೃತ್ತ ಸೈನಿಕರರನ್ನು ಸನ್ಮಾನಿಸಲಾಗುವುದು ಎಂದರು.
ಉಪಾಧ್ಯಕ್ಷ ನರೇಂದ್ರ ತಳೇಕರ್, ಸಂದೀಪ ತಳೇಕರ್, ಕಾರ್ಯದರ್ಶಿ ವಿಲಾಸ ನಾಗೇಕರ್, ಖಜಾಂಚಿ ಅಭಿಷೇಕ ನಾಯ್ಕ, ಸಂತೋಷ ಠಾಕರಕರ್, ಪ್ರಶಾಂತ ತಳೇಕರ್, ಕೃಷ್ಣಾ ಕೊಚ್ರೇಕರ್, ಮೋಹನ ಕೊಚ್ರೇಕರ್, ಪ್ರಕಾಶ ತಳೇಕರ್, ಪ್ರಕಾಶ ಕಂತ್ರಿಕರ್, ನಿತೇಶ ಕಂತ್ರಿಕರ್, ಜಗದೀಶ ತಳೇಕರ್ ಸುದ್ದಿಗೋಷ್ಠಿಯಲ್ಲಿದ್ದರು.