ಕಾಸರಗೋಡು: ಜಿಲ್ಲೆಯ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಅಜಿತ್ ಕುಮಾರ್ ಆಯ್ಕೆಯಾಗಿದ್ದಾರೆ. ಜುಲೈಯಲ್ಲಿ ಇವರು ನಡೆಸಿರುವ ಕಾರ್ಯಾಚರಣೆ ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಉತ್ತಮ ಅಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ.
ಮಾದಕ ವಸ್ತು ವಿರುದ್ಧ ಕಾರ್ಯಚರಣೆಯಲ್ಲಿ ದಿಟ್ಟ ಕ್ರಮ, ತಲೆಮರೆಸಿಕೊಂಡಿದ್ದ ಹಲವು ಮಂದಿ ಆರೋಪಿಗಳ ಬಂಧನ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕೈಗೊಂಡ ಕ್ರಮ, ಕಳ್ಳರ ಪತ್ತೆಹಚ್ಚಿ ಸೆರೆಹಿಡಿಯುವ ಚಾಕಚಕ್ಯತೆ ಆಧಾರವಾಗಿರಿಸಿ ಈ ಆಯ್ಕೆ ನಡೆಸಲಾಗಿದೆ. ಕಾಸರಗೋಡು ನಗರ ಠಾಣೆಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಸ್ಪೆಷಲ್ ಬ್ರಾಂಚ್‌ಗೆ ವರ್ಗಾವಣೆಗೊಂಡಿದ್ದು, ಇತ್ತೀಚೆಗಷ್ಟೆ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು.