ಕಂಪ್ಲಿ: ನಾಗಲೀಕ ಬಣಗಾರ ಸಿಂಪಿ ಸಮುದಾಯದವರಿಗೆ 2ಎ ಅಡಿಯಲ್ಲಿ ಸಿಂಪಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾಡಳಿತ ಜಾಗೃತಿ ತೋರಬೇಕು ಎಂದು ಜಡೇಶಂಕರಲಿಂಗ ಸಿಂಪಿ ಸೇವಾ ಸಂಘದ ಅಧ್ಯಕ್ಷ ಕಾರೇಮಂಗಿ ತಿಪ್ಪೇಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ: ಶಿವಸಿಂಪಿ ಸಮಾಜದಿಂದ ಪುರಸ್ಕಾರ
ಕೋಟೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ನಾಗಲೀಕ ಬಣಗಾರ ಸಿಂಪಿ ಸಮುದಾಯದ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಕೆಲ ತಾಲೂಕಿನಲ್ಲಿ 2ಎ ಅಡಿಯ ಸಿಂಪಿ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸಿಂಪಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡುವಲ್ಲಿ ಶಾಸಕರು ಮುಂದಾಗಬೇಕು ಎಂದರು.
ಪ್ರಮುಖರಾದ ನಾಗರಾಜ ದಬಾಡೆ, ಬಣಗಾರ ವೀರಣ್ಣ, ಗೂಗಲ್ ಸುರೇಶ್, ಜಿ.ಸಿ.ನಾಗರಾಜ, ಬಸವರಾಜ, ಸಜ್ಜೇದ ಸಿದ್ದಪ್ಪ, ಕುರುಗೋಡು ಆಲೂರು ವೀರಣ್ಣ, ಎಮ್ಮಿಗನೂರಿನ ಸೋಮಶೇಖರ, ಸೂಗೂರು ಸಿಂಪಿಗರ ಬಸವರಾಜಪ್ಪ ಇತರರಿದ್ದರು. ಜಡೇಶಂಕರಲಿಂಗ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಡೇಶಂಕರಲಿಂಗ ಮೂರ್ತಿಯನ್ನು ಬಿಲ್ವಪತ್ರೆ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.