ಜಿಲ್ಲೆ

ಒಗ್ಗಟ್ಟಿನಿಂದ ಸಮಾಜಕ್ಕೆ ಕೊಡುಗೆ ಸಾಧ್ಯ : ದಿವಾಕರ ಮೂಲ್ಯ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಒಗ್ಗಟ್ಟಿನಿಂದ ಮುಂದಿನ ಪೀಳಿಗೆಯವರಿಗೆ ಸಮಾಜದಲ್ಲಿ ಯಾವುದಾದರೊಂದು ಕೊಡುಗೆ ನೀಡಲು ಸಾಧ್ಯ. ಎಲ್ಲ ವಯೋಮಾನದವರೂ ಸಮಾಜ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು. ಬಡವರಿಗೆ ಸಹಾಯ ಮಾಡಬೇಕು ಎಂದು ಬೆಂಗಳೂರು ಕುಲಾಲ ಸೇವಾ ಸಂಘ ಅಧ್ಯಕ್ಷ ದಿವಾಕರ ಮೂಲ್ಯ ತಿಳಿಸಿದರು.

ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಭಾನುವಾರ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಸೇವಾದಳದ ವತಿಯಿಂದ ನಡೆದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ-ಸೀಸನ್ 3 ಸಮಾರಂಭದಲ್ಲಿ ನಮ್ಮೂರ ಟೆಕ್ನಿಷಿಯನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಟೆಕ್ನಿಷಿಯನ್ ಮಾಧವ ಕುಲಾಲ್, ಮಹಿಳಾ ಅಟೋರಿಕ್ಷಾ ಚಾಲಕಿ ವನಿತಾ, ಬಂಟ್ವಾಳ ತಾಲೂಕಿನ 116 ಟೆಕ್ನಿಷಿಯನ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಉದ್ಯಮಿ ಐ.ಉಮೇಶ್ ಬಂಗೇರ, ಉದ್ಯಮಿ ಸುಧಾಕರ ಸಾಲ್ಯಾನ್, ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ ಅಧ್ಯಕ್ಷ ಪದ್ಮನಾಭ ಕುಲಾಲ್, ನೀಲಪ್ಪ ಸಾಲ್ಯಾನ್, ವಿಜಯ ಕುಲಾಲ್ ಬೆಂಗಳೂರು, ಜಿಲ್ಲಾ ಮಾತೃ ಸಂಘದ ದಳಪತಿ ಪ್ರದೀಪ್ ಅತ್ತಾವರ ಉಪಸ್ಥಿತರಿದ್ದರು. ಸೇವಾದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು ಸ್ವಾಗತಿಸಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ದುಗನಕೋಡಿ ವಂದಿಸಿದರು.