ಜಿಲ್ಲೆ

ನೈತಿಕತೆಯಿಲ್ಲದ ಹಣ ಗಳಿಕೆಗೆ ಸಿಗದು ಮಾನ್ಯತೆ: ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಬಾರ್ಯ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗುರಿಯ ಹಿಂದೆ ಹೋದವರು ಯಶಸ್ವಿಯಾಗುತ್ತಾರೆ. ಹಣ, ಪ್ರತಿಷ್ಠ್ಠೆಯ ಹಿಂದೆ ಬಿದ್ದವರು ಬದುಕಿನಲ್ಲಿ ಗೆಲ್ಲುವುದಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಹಣ ಬಲವೆ ಶ್ರೇಷ್ಠ ಎಂದು ಕಂಡರೂ, ನೈತಿಕತೆಯಿಲ್ಲದ ಹಣ ಗಳಿಕೆಗೆ ಮಾನ್ಯತೆಯಿಲ್ಲ ಎಂದು ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಬಾರ್ಯ ಹೇಳಿದರು.

ಗುರುವಾಯನಕೆರೆಯ ವಿದ್ಯಾಸಾಗರ ಕ್ಯಾಂಪಸ್‌ನ ಸಭಾಂಗಣದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಮನುಷ್ಯ ಬುದ್ಧಿವಂತ ಜೀವಿ. ಪರಿಶ್ರಮಪಟ್ಟರೆ ಮನುಷ್ಯ ಎಷ್ಟು ಉನ್ನತ ಸ್ಥಾನಕ್ಕೂ ಏರಬಹುದು ಎಂದರು.

ನೀಟ್ ಬಗ್ಗೆ ಭೌತ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸತ್ಯನಾರಾಯಣ ಭಟ್, ಜೆಇಇ ಬಗ್ಗೆ ಭೌತ ವಿಜ್ಞಾನ ವಿಭಾಗದ ಶ್ರೀನಿಧಿ ರಾಜ್ ಶೆಟ್ಟಿ, ಸಿಇಟಿ ಬಗ್ಗೆ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ ಮಾಹಿತಿ ನೀಡಿದರು.

ಜೀವ ವಿಜ್ಞಾನ ವಿಭಾಗ ಉಪನ್ಯಾಸಕ ಪ್ರಜ್ವಿತ್ ರೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಪ್ರಸ್ತಾವಿಸಿದರು. ಕನ್ನಡ ವಿಭಾಗದ ಮಹಮ್ಮದ್ ಮುನೀರ್ ನಿರೂಪಿಸಿದರು. ಬಳಿಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.