ಜಿಲ್ಲೆ

ಅಂಕೋಲಾ ಅನಧಿಕೃತ ಮನೆ, ಅಂಗಡಿ ತೆರವಿಗೆ ಆದೇಶ

Uttara Kannada - Subash Hegde

ಕಾರವಾರ: ಶಿರೂರು ಗುಡ್ಡ ಕುಸಿತದ ಘಟನೆಯ ನಂತರ ಅಂಕೋಲಾ ತಹಸೀಲ್ದಾರ್ ಅವರು ತಾಪಂ ಮೂಲಕ ವಿವಿಧ ಗ್ರಾಪಂಗಳಿಗೆ ಕಳಿಸಿರುವ ನೋಟಿಸ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕುಮಟಾ ಸಹಾಯಕ ಆಯುಕ್ತರ ಸೂಚನೆಯಂತೆ ಆಗಸ್ಟ್ 2 ರಂದು ತಹಸೀಲ್ದಾರರು ತಾಪಂ ಇಒ ಅವರಿಗೆ ಒಂದು ಪತ್ರ ಬರೆದು, ಎಲ್ಲ ಗ್ರಾಪಂಗಳಿಗೆ ಕ್ರಮಕ್ಕೆ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಲ್ಲ ಗೂಡಂಗಡಿಗಳು ಹಾಗೂ ಗುಡ್ಡಗಾಡು ಪ್ರದೇಶದಲ್ಲಿರುವ ಅನಧಿಕೃತ ಮನೆಗಳನ್ನು ಪರಿಶೀಲಿಸಿ ತಕ್ಷಣ ತೆರವು ಮಾಡಲು ಕ್ರಮ ವಹಿಸಬೇಕು. ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಇದು ಅಂಕೋಲಾದಲ್ಲಿ ಆತಂಕ ಹಾಗೂ ಆಕ್ಷೇಪಕ್ಕೆ ಕಾರಣವಾಗಿದೆ. ತಾಲೂಕಿನ ಸಾಕಷ್ಟು ಮನೆಗಳು ಹಾಗೂ ಅಂಗಡಿಗಳು ಅರಣ್ಯ ಅಥವಾ ಅತಿಕ್ರಮಣ ಜಾಗದಲ್ಲೇ ಇವೆ. ಹಾಗೆ ತೆಗೆಯುತ್ತ ಹೋದರೆ ಅರ್ಧಕ್ಕರ್ಧ ಮನೆಗಳನ್ನು ತೆರವು ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.