ಸಿರಿಗೇರಿ: ಗ್ರಾಮದ ಪೊಲೀಸ್ ಠಾಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಸಹಿಪ್ರಾ (ತಾತನ)ಶಾಲೆಯಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಯಿತು. ಪಿಎಸ್‌ಐ ಸದ್ದಾಂ ಹುಸೇನ್ ಅವರು ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ, ಅಪರಾಧಿಗಳ ಬಂಧಿಖಾನೆ, ಬಂದೂಕುಗಳ ಉಪಯೋಗ ಹಾಗೂ ಸಿಬ್ಬಂದಿ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ:ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪ್ರಥಮ ಚಿಕಿತ್ಸೆ, ಮಹಿಳಾ ಪ್ರಸೂತಿ ಚಿಕಿತ್ಸೆ, ಔಷಧಾಲಯ, ರಕ್ತ ಪರೀಕ್ಷೆ ಬಗ್ಗೆ ವೈದ್ಯಾಧಿಕಾರಿ ಪೂಜಾರ್ ನಾಗರಾಜ್ ತಿಳಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಿರಿಯ ಅರೋಗ್ಯಾಧಿಕಾರಿ ಚಿದಾನಂದ, ಮುಖ್ಯಶಿಕ್ಷಕರಾದ ಟಿ.ಎಚ್.ಶಕ್ಷಾವಲಿ, ಗೋವಿಂದ ರಾಜು, ಶಿಕ್ಷಕರಾದ ಬೀಬಿ ಫಾತಿಮಾ, ಬಾಲೆ ಸಾಬ್ ಇತರರಿದ್ದರು.