ಸಾಂದರ್ಭಿಕ ಚಿತ್ರ 
ಜಿಲ್ಲೆ

ರಾಜ್ಯದ ಈ ಜಿಲ್ಲೆಯಲ್ಲಿ ಇನ್ನೂ ನಿಂತಿಲ್ಲ ಬಯಲು ಶೌಚ!

Bengaluru - General - Rama Kishan K V

ತನುಜಾ ಕೆ. ವಿಜಯಪುರ
ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ಮನೆಗೂ ಶೌಚಗೃಹ ಕಟ್ಟಿಸಿಕೊಡಲು ಸ್ಥಳೀಯ ಆಡಳಿತಗಳ ಮೂಲಕ 50 ಸಾವಿರ ರೂ.ವರೆಗೆ ಅನುದಾನ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಈಗಲೂ ಬಯಲು ಶೌಚ ಪದ್ಧತಿ ಮುಂದುವರಿದಿದೆ.

ಸಾಕಷ್ಟು ಹಳ್ಳಿಗಳಲ್ಲಿ ಜನರು ಬಯಲು ಶೌಚವನ್ನೇ ಉಪಯೋಗಿಸುತ್ತಿದ್ದಾರೆ. ಸರ್ಕಾರ ಮನೆ ಮನೆಗೆ ಶೌಚಗೃಹಗಳನ್ನು ನಿರ್ಮಿಸಿಕೊಟ್ಟರೂ ಜನರು ಉಪಯೋಗಿಸುತ್ತಿಲ್ಲ. ಉದಾಹರಣೆಗೆ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ, ಸಾರವಾಡ, ಕಜ್ಜಾಪುರ, ದೇವರಹಿಪ್ಪರಗಿ ಭಾಗಗಳಲ್ಲಿ ಜನರು ಸರ್ಕಾರ ಕಟ್ಟಿಸಿದ ಶೌಚಾಲಯಗಳನ್ನು ಉಪಯೋಗಿಸದೆ ಸ್ಟೋರ್ ರೂಂಗಳಾಗಿ ಬಳಸಲಾಗುತ್ತಿದೆ. ಶೌಚಗೃಹ ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯ ಇದೆ.

ಬಯಲು ಶೌಚ ಬಿಟ್ಟು ಶೌಚಗೃಹಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಿಗೆ ಹಲವು ಬಾರಿ ತಿಳಿ ಹೇಳುವ ಕೆಲಸ ಮಾಡಲಾಗುತ್ತಿದೆ ಆದಾಗ್ಯ ಜನ ಸ್ವಚ್ಚತೆ ಕಾಪಾಡುತ್ತಿಲ್ಲ. ಅಲ್ಲದೆ, ಶೌಚಗೃಹಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಗೀತಾ ಬಾಯಿ ಕಲ್ಲೊಳ್ಳಿಕರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಾರವಾಡ, ವಿಜಯಪುರ

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯೋಜನೆಯನ್ನು ಸಾಕಷ್ಟು ಜನರು ಬಳಕೆ ಮಾಡುತ್ತಿಲ್ಲ. ಮೊದಲಿನಿಂದ ಬೈಯಲಿಗೆ ಹೋಗುವ ರೂಡಿ ಒಂದಾದರೆ ಇನ್ನೊಂದು ಕಡೆ ಅಗತ್ಯ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಶೌಚಗೃಹಗಳನ್ನು ಜನರು ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕು.
- ವೀರಪ್ಪ ವಿ.ಪಾರಶೆಟ್ಟಿ, ಸ್ಥಳೀಯ ನಿವಾಸಿ