ಜಿಲ್ಲೆ

ಹಸಿರು ಪಟಾಕಿ (Green Fireworks) ಗಳನ್ನು ಮಾತ್ರ ಹೊಡೆಯಲು ಅವಕಾಶ

Uttara Kannada - Subash Hegde

ಕಾರವಾರ: ಹಸಿರು ಪಟಾಕಿ(green fireworks) ಗಳನ್ನು ಮಾತ್ರ ಬಳಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಕರೆ ನೀಡಿದರು.

ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಂಗಮ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಿಎಸ್‌ಐಆರ್, ನೀರಿ ಚಿಹ್ನೆಗಳು, ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಮತ್ತು ಅಂಥ ಪಟಾಕಿಗಳನ್ನು ಮಾತ್ರ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸೋಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದರು.

ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ಪಟಾಕಿ ಬಳಕೆಯಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಮಾತ್ರವಲ್ಲ ವೈಯಕ್ತಿಕವಾಗಿ ಗಾಯ, ನೋವುಗಳು ಆಗುವ ಸಾಧ್ಯತೆ ಇದೆ. ಪಟಾಕಿಗಳಲ್ಲಿ ಭಾರ ಲೋಹವನ್ನು ಬಳಸುವುದರಿಂದ ಇದು ಮಾನವನ ಆರೋಗ್ಯದ ಮೇಲೆ ಹಾಗೂ ಇತರೇ ಪ್ರಾಣಿ ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಣ್ಣು ಉರಿ, ಚರ್ಮ ಸಂಬAಧ ರೋಗಗಳು ಅಸ್ತಮಾ, ಅಲರ್ಜಿಗಳು ಹೆಚ್ಚಾಗಿ ಬಾಽಸುತ್ತವೆ ಎಂದರು. ಈ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಿದರು.

ಬಾಡ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಧ್ಯಾಯಕಿ ರೂಪಾ ಗಾಂವಕರ, ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್.ಶೆಟ್ಟಿ, ಶಿಕ್ಷಕಿಯರಾದ ರಾಜೇಶ್ವರಿ, ವಿಜಯಾ ನಾಯ್ಕ, ವಿದ್ಯಾರ್ಥಿಗಳು ಇದ್ದರು.