ಜಿಲ್ಲೆ

13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

ಸೌಮ್ಯ ಆರ್

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ವಂಚನೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು 13 ಲಕ್ಷ ರೂ.ಗೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕಾಸರಗೋಡು ಸೈಬರ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆನ್‌ಲೈನ್ ಟ್ರೇಡಿಂಗ್ ಹೆಸರಿನ ಸಂಸ್ಥೆ ಶಿಕ್ಷಕಿಯನ್ನು ಸಂಪರ್ಕಿಸಿದ್ದು, ಉತ್ತಮ ಬಡ್ಡಿದರ ಒದಗಿಸುವ ಭರವಸೆಯೊಂದಿಗೆ ಅವರಿಂದ ಹಣ ಠೇವಣಿಯಾಗಿ ತೆಗೆದುಕೊಂಡಿದ್ದರು. ಆರಂಭದಲ್ಲಿ ಸಣ್ಣ ಮೊತ್ತ ಪಡೆದ ನಂತರ ಮುಂದಿನ ಕೆಲವು ಕಂತುಗಳಲ್ಲಿ ಒಟ್ಟು 13.37 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.